ನವದೆಹಲಿ[ಮೇ.28]: ವರ್ಷಾಂತ್ಯದಲ್ಲಿ ಆರಂಭವಾಗಲಿರುವ ದೇಶಿಯ ಕ್ರಿಕೆಟ್ ಟೂರ್ನಿಗೆ ಸಜ್ಜಾಗುವ ದೃಷ್ಟಿಯಿಂದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಯುವ ಬ್ಯಾಟ್ಸ್‌ಮನ್ ಸರ್ಫರಾಜ್ ಖಾನ್ ಮುಂಬೈನ ಬಿಕೆಸಿ ಒಳಾಂಗಣ ನೆಟ್ಸ್‌ನಲ್ಲಿ ಫಿಟ್ನೆಸ್ ಟೆಸ್ಟ್‌ನಲ್ಲಿ ನಿರತರಾಗಿದ್ದಾರೆ.
ಆರ್‌ಸಿಬಿಯ ಫಿಸಿಯೋ ಹೆಚ್ಚಿನ ತರಬೇತಿಗೆ ಸಲಹೆ ನೀಡಿದ್ದರಿಂದ ಸರ್ಫರಾಜ್ ತಮ್ಮ ದೇಹದ ಕೆಳ ಭಾಗದ ಅಂಗಾಂಗಗಳಿಗೆ ಹೆಚ್ಚಿನ ಅಭ್ಯಾಸ ನಡೆಸುತ್ತಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಕಳೆದ ಐಪಿಎಲ್‌ನಿಂದ ದೂರ ಉಳಿದಿದ್ದ ಸರ್ಫರಾಜ್‌ರನ್ನು ಈ ಬಾರಿ ಆರ್‌ಸಿಬಿ ₹1.75 ಕೋಟಿ ಹಣ ನೀಡಿ ರಿಟೈನ್ ಮಾಡಿಕೊಂಡಿತ್ತು. 
ಈ ಬಾರಿ ಸರ್ಫರಾಜ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ 7 ಪಂದ್ಯಗಳನ್ನಾಡಿ ಕೇವಲ 51 ರನ್‌ಗಳಿಸಿ ನಿರಾಸೆ ಮೂಡಿಸಿದ್ದಾರೆ. ಸನ್’ರೈಸರ್ಸ್ ಹೈದರಾಬಾದ್ ವಿರುದ್ಧ ಪಂದ್ಯದಲ್ಲಿ 8 ಎಸೆತಗಳಲ್ಲಿ 22 ರನ್ ಬಾರಿಸಿದ್ದೇ ಸರ್ಫರಾಜ್ ಈ ಆವೃತ್ತಿಯ ಗರಿಷ್ಠ ವೈಯುಕ್ತಿಕ ಮೊತ್ತವೆನಿಸಿದೆ.