ಮುಂಬೈ(ಜು.30): ವಿಶ್ವಕಪ್ ಟೂರ್ನಿ ಬಳಿಕ ಟೀಂ ಇಂಡಿಯಾ ನಾಯಕತ್ವ ಕುರಿತು ಹಲವು ಚರ್ಚೆಗಳು ಆಗಿವೆ. ನಾಯಕತ್ವ ಬದಲಾವಣೆಗೆ ಆಗ್ರಹಕ ಕೂಡ ಕೇಳಿ ಬಂದಿತ್ತು. ವೆಸ್ಟ್ ಇಂಡೀಸ್ ಸರಣಿಗೆ ತಂಡ ಪ್ರಕಟಗೊಳ್ಳುತ್ತಿದ್ದಂತೆ ನಾಯಕತ್ವ ಬದಲಾವಣೆಗೆ ತೆರೆ ಬಿದ್ದಿತ್ತು. ಇಷ್ಟು ದಿನ ತಣ್ಣಗಾಗಿದ್ದ ನಾಯಕತ್ವ ಬದಲಾವಣೆ ವಿಚಾರ ಇದೀಗ ಮಾಜಿ ನಾಯಕ ಸುನಿಲ್ ಗವಾಸ್ಕರ್ ಪ್ರಶ್ನಿಸೋ ಮೂಲಕ ಮತ್ತೆ ಮುನ್ನಲೆಗೆ ಬಂದಿದೆ. ಕೊಹ್ಲಿ ನಾಯಕತ್ವವನ್ನು ಪ್ರಶ್ನಿಸಿದ ಗವಾಸ್ಕರ್‌ಗೆ, ಕಮೆಂಟೇಟರ್ ಸಂಜಯ್ ಮಂಜ್ರೇಕರ್ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: ಕೊಹ್ಲಿ ನಾಯಕತ್ವ ಮುಂದುವರಿಕೆಗೆ ಗವಾಸ್ಕರ್ ಆಕ್ಷೇಪ

ವಿಶ್ವಕಪ್ ಬಳಿಕ ವಿರಾಟ್ ಕೊಹ್ಲಿ ನಾಯಕತ್ವವನ್ನು ಮುಂದುವರಿಸಿರುವ ಕುರಿತು ಗವಾಸ್ಕರ್ ಆಯ್ಕೆ ಸಮಿತಿಯನ್ನು ಪ್ರಶ್ನಿಸಿದ್ದಾರೆ. ವಿಶ್ವಕಪ್ ವರೆಗೆ ವಿರಾಟ್ ಕೊಹ್ಲಿಗೆ ನಾಯಕತ್ವ ನೀಡಲಾಗಿತ್ತು. ವಿಶ್ವಕಪ್ ಟೂರ್ನಿ ಬಳಿಕ ಕೊಹ್ಲಿ ನಾಯಕತ್ವದಲ್ಲಿ ಮುಂದುವರಿಯುವ ಕುರಿತು ಆಯ್ಕೆ ಸಮಿತಿ ಸಭೆ ಸೇರಿಲ್ಲ. ಕೊಹ್ಲಿ ಮರು ಆಯ್ಕೆ ಕುರಿತು ಯಾವುದೇ ಸಭೆ ಮಾಡಿಲ್ಲ. ವೆಸ್ಟ್ ಇಂಡೀಸ್ ವಿರುದ್ದದ ಸರಣಿಗೆ ತಂಡದ ಆಯ್ಕೆಗಿಂತ ನಾಯಕನ ಆಯ್ಕೆಯಾಗಬೇಕಿತ್ತು ಎಂದು ಗವಾಸ್ಕರ್ ಹೇಳಿದ್ದಾರೆ. ಇದಕ್ಕೆ ಮಂಜ್ರೇಕರ್ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

 

ಇದನ್ನೂ ಓದಿ: ಕೊಹ್ಲಿ-ರೋಹಿತ್ ಕೋಲ್ಡ್ ವಾರ್; ಕೊನೆಗೂ ಸ್ಪಷ್ಟನೆ ನೀಡಿದ ನಾಯಕ!

ಗವಾಸ್ಕರ್ ಮಾತನ್ನು ಒಪ್ಪುವುದಿಲ್ಲ. ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಉತ್ತಮ ಪ್ರದರ್ಶನ ನೀಡಿದೆ. 7 ಪಂದ್ಯದಲ್ಲಿ ಗೆಲುವು ಸಾಧಿಸಿದರೆ, 2ರಲ್ಲಿ ಸೋಲು ಕಂಡಿದೆ. ಎರಡು ಸೋಲ ಕೂಡ ಕಡಿಮೆ ಅಂತರದ ಸೋಲಾಗಿತ್ತು. ಹೀಗಾಗಿ ಕೊಹ್ಲಿ ಬದಲಾವಣೆ ಮಾಡೋ ಮಾತಿಲ್ಲ ಎಂದು ಮಂಜ್ರೇಕರ್ ಟ್ವೀಟ್ ಮಾಡಿದ್ದಾರೆ.