ಸಂಪ್ರದಾಯ ಹಾಗೂ ಉಡುಪು ವಿಚಾರದಲ್ಲಿ ಟೆನಿಸ್‌ ತಾರೆ ಸಾನಿಯಾ ಮಿರ್ಜಾ ಸಾಮಾಜಿಕ ಜಾಲತಾಣಗಳಿಗೆ ಆಹಾರವಾಗಿದ್ದಾರೆ. ಇತ್ತೀಚೆಗೆ ಸೈಫ್‌ ಅಲಿ ಖಾನ್‌ ಮತ್ತು ಕರೀನಾ ಕಪೂರ್‌ ತಮ್ಮ ಮಗುವಿಗೆ ಇಟ್ಟ 'ತೈಮೂರ್‌' ಎಂಬ ಹೆಸರು ಹಾಗೂ ಪತ್ನಿಯ ಸ್ಲೀವ್‌ ಲೆಸ್ ಫೋಟೋ ಹಾಕಿದ್ದ ಕ್ರಿಕೆಟಿಗ ಮೊಹಮ್ಮದ್ ಶಮಿ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ-ಟಿಪ್ಪಣಿಗಳು ವ್ಯಕ್ತವಾಗಿದ್ದವು. ಇದೀಗ ಸಾನಿಯಾ ಮಿರ್ಜಾ ಸರದಿ.

ನವದೆಹಲಿ(ನ.11): ಸಂಪ್ರದಾಯ ಹಾಗೂ ಉಡುಪು ವಿಚಾರದಲ್ಲಿ ಟೆನಿಸ್‌ ತಾರೆ ಸಾನಿಯಾ ಮಿರ್ಜಾ ಸಾಮಾಜಿಕ ಜಾಲತಾಣಗಳಿಗೆ ಆಹಾರವಾಗಿದ್ದಾರೆ. ಇತ್ತೀಚೆಗೆ ಸೈಫ್‌ ಅಲಿ ಖಾನ್‌ ಮತ್ತು ಕರೀನಾ ಕಪೂರ್‌ ತಮ್ಮ ಮಗುವಿಗೆ ಇಟ್ಟ 'ತೈಮೂರ್‌' ಎಂಬ ಹೆಸರು ಹಾಗೂ ಪತ್ನಿಯ ಸ್ಲೀವ್‌ ಲೆಸ್ ಫೋಟೋ ಹಾಕಿದ್ದ ಕ್ರಿಕೆಟಿಗ ಮೊಹಮ್ಮದ್ ಶಮಿ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ-ಟಿಪ್ಪಣಿಗಳು ವ್ಯಕ್ತವಾಗಿದ್ದವು. ಇದೀಗ ಸಾನಿಯಾ ಮಿರ್ಜಾ ಸರದಿ.

ಹೌದು, ಉಡುಪು ವಿಷಯವಾಗಿ ಟೆನಿಸ್‌ ತಾರೆ ಸಾನಿಯಾ ಬಗ್ಗೆ ಫೇಸ್‌‌'ಬುಕ್‌'ನಲ್ಲಿ ಟೀಕೆಗಳು ವ್ಯಕ್ತವಾಗಿವೆ. ಫೇಸ್‌‌'ಬುಕ್‌'ನಲ್ಲಿ ಸಾನಿಯಾ ಮೈ ಪ್ರದರ್ಶಕ ಉಡುಪು ಧರಿಸಿದ ಫೋಟೋ ಅಪ್‌ಲೋಡ್‌ ಮಾಡುತ್ತಿದ್ದಂತೆ ಅನೇಕ ರೀತಿಯ ಕಾಮೆಂಟ್‌'ಗಳ ಸುರಿ ಮಳೆ ಶುರುವಾಗಿದೆ. 'ಇದು ತಾತ್ಕಾಲಿಕ ಜೀವನ. ಸಾವಿನ ನಂತರದ್ದು ಶಾಶ್ವತ ಜೀವನ ಎಂಬುವುದನ್ನು ನೀವು ಮರೆಯಬೇಡಿ' ಎಂಬಿತ್ಯಾದಿ ಕಾಮೆಂಟ್‌ಗಳನ್ನು ಫೇಸ್‌‌ಬುಕ್‌ನಲ್ಲಿ ಮಾಡಲಾಗಿದೆ.

ಒಟ್ಟು 1.8 ಸಾವಿರಕ್ಕೂ ಹೆಚ್ಚು ಕಮೆಂಟ್ ಮಾಡಲಾಗಿದ್ದು, ಅನೇಕ ಕಾಮೆಂಟ್‌ಗಳು ಧರ್ಮಾಂಧತೆಯಿಂದ ಕೂಡಿವೆ. ಇನ್ನು, ಕ್ರಿಕೆಟಿಗ ಮೊಹಮ್ಮದ್ ಶಮಿ ತಮ್ಮ ಪತ್ನಿ ಸ್ಲೀವ್‌ ಡ್ರೆಸ್‌ನ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಹಾಕಿದ್ದಕ್ಕೆ ಶಮಿ ವಿರುದ್ಧ ಕೆಲವರು ವಾಗ್ದಾಳಿ ನಡೆಸಿದ್ದರು. ಮತ್ತೆ ಕೆಲವರು ಇದರಲ್ಲಿ ತಪ್ಪೇನಿದೆ ಅಂತ ಶಮಿ ಬೆಂಬಲಕ್ಕೆ ನಿಂತಿದ್ದರು. ಇದಾದ ನಂತರ ಶಮಿ ಪತ್ನಿ ಜೊತೆಗಿನ ಮತ್ತೊಂದು ಫೋಟೋ ಹಾಕಿ ವಿರೋಧಿಗಳಿಗೆ ತಿರುಗೇಟು ನೀಡಿದ್ದರು.