ಸೇವಾ ತೆರಿಗೆ ಪಾವತಿಸದ ಹಿನ್ನೆಲೆಯಲ್ಲಿ ಟೆನ್ನಿಸ್‌ ತಾರೆ ಸಾನಿಯಾ ಮಿರ್ಜಾಗೆ ಸೇವಾ ತೆರಿಗೆ ಇಲಾಖೆ ನೋಟಿಸ್‌ ಜಾರಿ ಮಾಡಿದೆ.
ಹೈದರಾಬಾದ್(ಫೆ.09): ಸೇವಾ ತೆರಿಗೆ ಪಾವತಿಸದ ಹಿನ್ನೆಲೆಯಲ್ಲಿ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾಗೆ ಸೇವಾ ತೆರಿಗೆ ಇಲಾಖೆ ನೋಟಿಸ್ ಜಾರಿ ಮಾಡಿದೆ.
ಸೇವಾ ತೆರಿಗೆ ಕಚೇರಿಯ ಪ್ರಧಾನ ಕಾರ್ಯದರ್ಶಿ ಫೆ.6ರಂದು ಸಾನಿಯಾಗೆ ನೋಟಿಸ್ ಜಾರಿ ಮಾಡಿದ್ದು, ಫೆಬ್ರವರಿ 16ರರೊಳಗೆ ತಾವು ಅಥವಾ ತಮಗೆ ಸಂಬಂಧಿಸಿದ ವ್ಯಕ್ತಿ ಸೇವಾ ತೆರಿಗೆ ಇಲಾಖೆ ಮುಂದೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ.
ಹಣಕಾಸು ಕಾಯ್ದೆ 1994 ಕಾಯ್ದೆ ಉಲ್ಲಂಘಿಸಿದ ಆರೋಪದಡಿ ನಿಮ್ಮ ವಿರುದ್ಧ ತನಿಖೆ ಮಾಡಲಾಗುವುದು ಎಂದು ಕೂಡ ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೇ, ಈ ವೇಳೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ನೀಡುವಂತೆಯೂ ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ. ಒಂದು ವೇಳೆ ಇದಕ್ಕೆ ತಪ್ಪಿದಲ್ಲಿ ಸಂಬಂಧಿಸಿದ ಐಪಿಸಿ ಸೆಕ್ಷನ್'ಗಳಡಿ ಶಿಕ್ಷೆಗೆ ತಾವು ಅರ್ಹರಾಗುವಿರಿ ಎಂದು ಎಚ್ಚರಿಕೆ ನೀಡಲಾಗಿದೆ.
