ಹೈದರಾಬಾದ್(ಆ.14): ಭಾರತ ಟೆನಿಸ್ ತಾರೆ ಸಾನಿಯಾ ಮಿರ್ಜಾ, ಪಾಕಿಸ್ತಾನ ಕ್ರಿಕೆಟಿಗ ಶೋಯಿಬ್ ಮಲ್ಲಿಕ್ ಮದುವೆಯಾದ ಮೇಲೆ ಹಲವು ವಿವಾದಗಳನ್ನ ಎದುರಿಸಬೇಕಾಯಿತು. ಇದೀದ ಸಾನಿಯಾ ಮಿರ್ಜಾಗೆ ಆಗಸ್ಟ್ 14 ರಂದೇ ಸ್ವಾತಂತ್ರ್ಯ ದಿನಾಚರಣೆಗ ಶುಭಕೋರಿದ ಟ್ವಿಟರಿಗನಿಗೆ ತಕ್ಕ ತಿರುಗೇಟು ನೀಡಿದ್ದಾರೆ.

ಟ್ವಿಟರಿಗನೊಬ್ಬ ಸಾನಿಯಾಗೆ ಟ್ವೀಟ್ ಮೂಲಕ ಸಾನಿಯಾ  ನಿಮ್ಮ ಸ್ವಾತಂತ್ರ್ಯ ದಿನಾಚರಣೆ ಇಂದೇ(ಆ.14) ಅಲ್ವಾ? ಸ್ವಾತಂತ್ರ್ಯ ದಿನಾಚರಣೆಗೆ ಶುಭಾಶಯ ಎಂದಿದ್ದಾರೆ.  ಆಗಸ್ಟ್ 14 ರಂದು ಪಾಕಿಸ್ತಾನ ಸ್ವಾತಂತ್ರ್ಯ ದಿನಾಚರಣೆ. ಹೀಗಾಗಿ ಟ್ವಿಟರಿಗೆ, ಸಾನಿಯಾ ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆಯನ್ನ ಆಚರಿಸುತ್ತಿದ್ದಾರೆ ಎಂದು ಸೂಕ್ಷ್ಮವಾಗಿ ಹೇಳಿದ್ದಾನೆ. 

ಟ್ವಿಟರಿಗನ ಶುಭಾಶಯಕ್ಕೆ ಸಾನಿಯಾ ತಿರುಗೇಟು ನೀಡಿದ್ದಾರೆ. ನನ್ನ ಹಾಗೂ ನನ್ನ ದೇಶದ ಸ್ವಾತಂತ್ರ್ಯ ದಿನಾಚರಣೆ ನಾಳೆ(ಆ.15).  ನನ್ನ ಪತಿ ಹಾಗೂ ಪತಿಯ ದೇಶದ ಸ್ವಾತಂತ್ರ್ಯ ದಿನಾಚರಣೆ ಇಂದು. ನಿಮ್ಮ ಗೊಂದಲ ಈಗ ಸರಿಯಾಗಿದೆ ಅಂದುಕೊಂಡಿದ್ದೇನೆ.  ನಿಮ್ಮ ಸ್ವಾತಂತ್ರ್ಯ ದಿನಾಚರಣೆ ಯಾವಾಗ ಎಂದು ಸಾನಿಯಾ ಪ್ರಶ್ನಿಸಿದ್ದಾರೆ.