2017ರ ಫ್ರೆಂಚ್ ಓಪನ್'ನಲ್ಲಿ ಬೋಪಣ್ಣ- ಡಾಬ್ರೋಸ್ಕಿ ಜೋಡಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

ಲಂಡನ್(ಜು.08): ಭಾರತದ ಅನುಭವಿ ಟೆನಿಸಿಗ ರೋಹನ್ ಬೋಪಣ್ಣ ಮತ್ತು ಸಾನಿಯಾ ಮಿರ್ಜಾ ಪ್ರತ್ಯೇಕ ಜೋಡಿ, ವಿಂಬಲ್ಡನ್ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಮಿಶ್ರ ಡಬಲ್ಸ್ ಹಾಗೂ ಮಹಿಳಾ ಡಬಲ್ಸ್‌'ನಲ್ಲಿ ಕ್ವಾರ್ಟರ್‌'ಫೈನಲ್ ಹಂತಕ್ಕೆ ಲಗ್ಗೆ ಇಟ್ಟಿದೆ.

ಇಂದು ನಡೆದ ಪ್ರೀ ಕ್ವಾರ್ಟರ್‌'ಫೈನಲ್ ಪಂದ್ಯದಲ್ಲಿ ಭಾರತದ ರೋಹನ್ ಬೋಪಣ್ಣ ಮತ್ತು ಗೇಬ್ರಿಯಾ ಡಾಬ್ರೋಸ್ಕಿ ಜೋಡಿ 7-6(7-2), 7-5 ಸೆಟ್‌'ಗಳಿಂದ ಫ್ರೆಂಚ್‌'ನ ಫ್ಯಾಬ್ರೈಸ್ ಮಾರ್ಟಿನ್ ಮತ್ತು ರೋಮೇನಿಯಾದ ರಾಲುಕಾ ಒಲಾರು ಜೋಡಿಯನ್ನು ಮಣಿಸುವ ಮೂಲಕ ಎಂಟರಘಟ್ಟಕ್ಕೆ ಕಾಲಿಟ್ಟಿದೆ.

2017ರ ಫ್ರೆಂಚ್ ಓಪನ್'ನಲ್ಲಿ ಬೋಪಣ್ಣ- ಡಾಬ್ರೋಸ್ಕಿ ಜೋಡಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

ಸಾನಿಯಾ ಜೋಡಿಗೆ ಜಯ

ಮಹಿಳಾ ಡಬಲ್ಸ್ ವಿಭಾಗದ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತದ ಸಾನಿಯಾ ಮಿರ್ಜಾ ಮತ್ತು ಬೆಲ್ಜಿಯಂನ ಕ್ರಿಸ್ಟಿನ್ ಫ್ಲಿಪ್‌'ಕಿನ್ಸ್ ಜೋಡಿ 6-3, 3-6, 6-4 ಸೆಟ್‌'ಗಳಿಂದ ಇಂಗ್ಲೆಂಡ್‌'ನ ನವೋಮಿ ಬ್ರಾಡಿ ಮತ್ತು ಹೆದರ್ ವ್ಯಾಟ್ಸನ್ ಜೋಡಿ ಎದುರು ಗೆಲುವು ಪಡೆದು ಎಂಟರಘಟ್ಟ ಪ್ರವೇಶಿಸಿತು.