ಹೈದರಾಬಾದ್(ನ.03): ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಕಳೆದ ವಾರ ಮುದ್ದಾದ ಗಂಡು ಮುಗುವಿಗೆ ಜನ್ಮ ನೀಡಿದ್ದರು. ಪತಿ, ಪಾಕಿಸ್ತಾನ ಕ್ರಿಕೆಟಿಗ ಶೋಯೆಬ್ ಮಲಿಕ್ ಟ್ವೀಟ್ ಮೂಲಕ ಸಂತಸವನ್ನ ಹಂಚಿಕೊಂಡಿದ್ದರು. ಇದೀಗ ಮೊದಲ ಬಾರಿಗೆ ಸಾನಿಯಾ ಹಾಗೂ ಶೊಯೆಬ್ ದಂಪತಿ ಮಗುವಿನ ಫೋಟೋ ವೈರಲ್ ಆಗಿದೆ.

ಆಸ್ಪತ್ರೆಯಲ್ಲಿದ್ದ ಸಾನಿಯಾ ಮಿರ್ಜಾ ಇದೀಗ ಮನಗೆ ತೆರಳಿದ್ದಾರೆ. ಈ ವೇಳೆ ಮಗುವಿನ ಜೊತೆ ಹೊರಬಂದ ಸಾನಿಯಾ ಮಿರ್ಜಾ ಕ್ಯಾಮರ ಕಣ್ಣಿಗೆ ಸೆರೆಯಾಗಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

 

ಮಗುವಿಗೆ ಇಜಾನ್ ಮಿರ್ಜಾ ಮಲಿಕ್ ಎಂದು ಹೆಸರಿಟ್ಟಿದ್ದಾರೆ. ಉರ್ದು ಭಾಷೆಯಲ್ಲಿ ಇಝ್‌ಹಾನ್ ಅಂದರೆ ದೇವರ ಉಡುಗೊರೆ ಎಂದರ್ಥ.  ಸಾನಿಯಾ-ಮಲಿಕ್ ಜೋಡಿ 2010ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಇದೇ ಏಪ್ರಿಲ್ ತಿಂಗಳಲ್ಲಿ ಸಾನಿಯಾ ಗರ್ಭಿಣಿಯಾಗಿರುವುದನ್ನು ಖಚಿತಪಡಿಸಿದ್ದರು. ಹೀಗಾಗಿ ಕೆಲವು ತಿಂಗಳುಗಳಿಂದಲೇ ಟೆನಿಸ್’ನಿಂದ ಹೊರಗುಳಿದಿದ್ದರು. 2020ರ ಟೋಕಿಯೊ ಒಲಿಂಪಿಕ್ಸ್ ವೇಳೆಗೆ ಸಾನಿಯಾ ಕಣಕ್ಕಿಳಿಯುವ ಸಾಧ್ಯತೆಯಿದೆ.