ಎಂಟರಘಟ್ಟದ ಪಂದ್ಯದಲ್ಲಿ ಸಾನಿಯಾ ಮತ್ತು ಸ್ಟ್ರೈಕೋವಾ ಜೋಡಿ 4-6, 4-6ಸೆಟ್‌'ಗಳಿಂದ ಸ್ವಿಟ್ಜರ್‌'ಲೆಂಡಿನ ಮಾರ್ಟಿನಾ ಹಿಂಗಿಸ್ ಮತ್ತು ತೈವಾನ್‌'ನ ಯಂಗ್ ಜನ್ ಚನ್ ಜೋಡಿ ಎದುರು ಸೋಲುಂಡಿತು.
ಇಂಡಿಯನ್ ವೆಲ್ಸ್(ಮಾ.15): ಭಾರತದ ಸ್ಟಾರ್ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಮತ್ತು ಜೆಕ್ ಗಣರಾಜ್ಯದ ಬಾರ್ಬೊರಾ ಸ್ಟ್ರೈಕೋವಾ ಜೋಡಿ, ಇಂಡಿಯನ್ ವೆಲ್ಸ್ ಟೆನಿಸ್ ಟೂರ್ನಿಯ ಮಹಿಳೆಯರ ಡಬಲ್ಸ್ ವಿಭಾಗದ ಕ್ವಾರ್ಟರ್'ಫೈನಲ್ ಪಂದ್ಯದಲ್ಲಿ ಮುಗ್ಗರಿಸಿದೆ.
ಇಲ್ಲಿನ ಟೆನಿಸ್ ಕೋರ್ಟ್ನಲ್ಲಿ ನಡೆದ ಎಂಟರಘಟ್ಟದ ಪಂದ್ಯದಲ್ಲಿ ಸಾನಿಯಾ ಮತ್ತು ಸ್ಟ್ರೈಕೋವಾ ಜೋಡಿ 4-6, 4-6ಸೆಟ್'ಗಳಿಂದ ಸ್ವಿಟ್ಜರ್'ಲೆಂಡಿನ ಮಾರ್ಟಿನಾ ಹಿಂಗಿಸ್ ಮತ್ತು ತೈವಾನ್'ನ ಯಂಗ್ ಜನ್ ಚನ್ ಜೋಡಿ ಎದುರು ಸೋಲುಂಡಿತು.
ಸ್ವಿಸ್ ಮತ್ತು ತೈವಾನ್ ಜೋಡಿ ಪಂದ್ಯದ ಆರಂಭದಿಂದಲೂ ಇಂಡೋ-ಜೆಕ್ ಆಟಗಾರ್ತಿಯರ ಎದುರು ಪ್ರಭಾವಿ ಆಟವಾಡುವ ಮೂಲಕ ಎರಡು ಸೆಟ್'ಗಳ ಆಟದಲ್ಲಿ ತಲಾ 2 ಪಾಯಿಂಟ್ಸ್ ಮುನ್ನಡೆ ಪಡೆದು ಪಂದ್ಯ ಜಯಿಸಿತು. ಇದರೊಂದಿಗೆ ಇಂಡಿಯನ್ ವೆಲ್ಸ್ ಟೆನಿಸ್ ಟೂರ್ನಿಯಲ್ಲಿ ಭಾರತದ ಸವಾಲು ಅಂತ್ಯವಾಗಿದೆ.
ಈ ಮೊದಲು ಪೇಸ್-ಪೋಟ್ರೋ ಜೋಡಿ ಟೂರ್ನಿಯಿಂದ ಹೊರಬಿದ್ದಿತ್ತು.
