ಇಂದು ನಡೆಯಲಿರುವ ಸೆಮೀಸ್'ನಲ್ಲಿ ಸಾನಿಯಾ ಜೋಡಿ, ತನ್ನ ಮಾಜಿ ಜತೆಗಾರ್ತಿ ಸ್ವಿಟ್ಜರ್'ಲ್ಯಾಂಡಿನ ಮಾರ್ಟಿನಾ ಹಿಂಗಿಸ್ ಹಾಗೂ ತೈವಾನ್'ನ ಚಾಂಗ್ ಯಂಗ್ ಜಾನ್ ಜೋಡಿ ವಿರುದ್ಧ ಸೆಣಸಾಡಲಿದೆ.
ರೋಮ್(ಮೇ.20): ಭಾರತದ ಭರವಸೆಯ ಆಟಗಾರ್ತಿ ಸಾನಿಯಾ ಮಿರ್ಜಾ ಹಾಗೂ ಖಜಕಿಸ್ತಾನದ ಯುರೊಸ್ಲೋವ ಶ್ವೆಡೋವಾ ಜೋಡಿ ಇಟಲಿ ಓಪನ್ ಮಹಿಳೆಯರ ಡಬಲ್ಸ್ ಟೆನಿಸ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದೆ.
ಕ್ವಾರ್ಟರ್ ಫೈನಲ್'ನಲ್ಲಿ ಈ ಜೋಡಿ, ಇಟಲಿಯ ಸಾರಾ ಎರಾನಿ ಹಾಗೂ ಮಾರ್ಟೀನಾ ಟ್ರವಿಸಾಸ್ ಜೋಡಿ ವಿರುದ್ಧ 6-4,6-1 ನೇರ ಸೆಟ್'ಗಳಲ್ಲಿ ಜಯಗಳಿಸಿದೆ.
ಇಂದು ನಡೆಯಲಿರುವ ಸೆಮೀಸ್'ನಲ್ಲಿ ಸಾನಿಯಾ ಜೋಡಿ, ತನ್ನ ಮಾಜಿ ಜತೆಗಾರ್ತಿ ಸ್ವಿಟ್ಜರ್'ಲ್ಯಾಂಡಿನ ಮಾರ್ಟಿನಾ ಹಿಂಗಿಸ್ ಹಾಗೂ ತೈವಾನ್'ನ ಚಾಂಗ್ ಯಂಗ್ ಜಾನ್ ಜೋಡಿ ವಿರುದ್ಧ ಸೆಣಸಾಡಲಿದೆ.