ಸಿಡ್ನಿ ಪ್ರಶಸ್ತಿಗಾಗಿ ಸಾನಿಯಾ ಮತ್ತು ಬಾರ್ಬೊರಾ ಜೋಡಿ ಶುಕ್ರವಾರ ನಡೆಯಲಿರುವ ಫೈನಲ್‌'ನಲ್ಲಿ ಟಿಮಿಯಾ ಬಾಬೊಸ್ ಮತ್ತು ರಷ್ಯಾದ ಅನಸ್ತಾಸಿಯಾ ಪಾವ್ಲಿಚೆಂಕೋವಾ ವಿರುದ್ಧ ಸೆಣಸಲಿದೆ.

ಸಿಡ್ನಿ(ಜ.12): ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಭಾರತದ ನಂ.1 ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಹಾಗೂ ಆಕೆಯ ಜತೆಯಾಟಗಾರ್ತಿ ಬಾರ್ಬೊರಾ ಸ್ಟ್ರೈಕೋವಾ ಜೋಡಿ ಸಿಡ್ನಿ ಇಂಟರ್'ನ್ಯಾಷನಲ್ ಟೂರ್ನಿಯಲ್ಲಿ ಫೈನಲ್ ತಲುಪುವಲ್ಲಿ ಯಶಸ್ವಿಯಾಗಿದ್ದಾರೆ.

ಇಂದು ನಡೆದ ಸೆಮಿಫೈನಲ್ ಸೆಣಸಾಟದಲ್ಲಿ ಈ ಇಂಡೋ-ಜೆಕ್ ಜೋಡಿ ಅಮೆರಿಕದ ವಾನಿಯಾ ಕಿಂಗ್ ಮತ್ತು ಯಾರೊಸ್ಲಾವ ಶ್ವೆಡೋವಾ ವಿರುದ್ಧ 6-1, 6-2 ನೇರ ಸೆಟ್‌'ಗಳ ಗೆಲುವು ಸಾಧಿಸಿ ಫೈನಲ್ ತಲುಪಿತು.

ಕಳೆದ ವಾರ ಅಮೆರಿಕ ಆಟಗಾರ್ತಿ ಬೆಥಾನಿ ಮಾಟೆಕ್ ಸ್ಯಾಂಡ್ಸ್ ಜತೆಯಲ್ಲಿ ಬ್ರಿಸ್ಬೇನ್ ಓಪನ್ ಗೆದ್ದಿದ್ದ ಸಾನಿಯಾ, 91 ವಾರಗಳ ಕಾಯ್ದುಕೊಂಡಿದ್ದ ವಿಶ್ವದ ನಂ.1 ಪಟ್ಟವನ್ನು ಇದೇ ಬೆಥಾನಿಗೆ ಬಿಟ್ಟುಕೊಟ್ಟಿದ್ದರು.

ಸಿಡ್ನಿ ಪ್ರಶಸ್ತಿಗಾಗಿ ಸಾನಿಯಾ ಮತ್ತು ಬಾರ್ಬೊರಾ ಜೋಡಿ ಶುಕ್ರವಾರ ನಡೆಯಲಿರುವ ಫೈನಲ್‌'ನಲ್ಲಿ ಟಿಮಿಯಾ ಬಾಬೊಸ್ ಮತ್ತು ರಷ್ಯಾದ ಅನಸ್ತಾಸಿಯಾ ಪಾವ್ಲಿಚೆಂಕೋವಾ ವಿರುದ್ಧ ಸೆಣಸಲಿದೆ.