ಸೆಮಿಫೈನಲ್ ಸುತ್ತಿನಲ್ಲಿ ಬಹುತೇಕ ಸಾನಿಯಾ-ಡೊಡಿಗ್ ಜೋಡಿ ಲಿಯಾಂಡರ್ ಪೇಸ್ ಮತ್ತು ಮಾರ್ಟಿನಾ ಹಿಂಗಿಸ್ ಜತೆ ಸೆಣಸುವ ಸಂಭವವಿದೆ.
ಮೆಲ್ಬೋರ್ನ್(ಜ.25): ಚೆನ್ನೈ ಓಪನ್ ಡಬಲ್ಸ್ ಚಾಂಪಿಯನ್ ರೋಹನ್ ಬೋಪಣ್ಣ ವರ್ಷದ ಮೊದಲ ಗ್ರಾಂಡ್'ಸ್ಲಾಮ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಇಂದು ನಡೆದ ಎಂಟರ ಘಟ್ಟದ ಪಂದ್ಯದಲ್ಲಿ ಸಾನಿಯಾ ಮಿರ್ಜಾ ಮತ್ತು ಆಕೆಯ ಜತೆಯಾಟಗಾರ ಕ್ರೊವೇಷಿಯಾದ ಇವಾನ್ ಡೊಡಿಗ್ ಜೋಡಿ ರೋಚಕವಾಗಿದ್ದ ಟೈಬ್ರೇಕ್ ಕಾದಾಟದಲ್ಲಿ 6-3, 3-6, 12-10 ಸೆಟ್'ಗಳಿಂದ ಬೋಪಣ್ಣ ಜೋಡಿಗೆ ಸೋಲುಣಿಸಿ ನಾಲ್ಕರ ಘಟ್ಟಕ್ಕೇರಿತು.
ಪುರುಷರ ಡಬಲ್ಸ್ ವಿಭಾಗದಲ್ಲಿನ ಎರಡನೇ ಸುತ್ತಿನ ವೈಫಲ್ಯದ ನಂತರ ಮಿಶ್ರ ಡಬಲ್ಸ್'ನಲ್ಲಿ ಪ್ರಶಸ್ತಿ ಅರಸುತ್ತಿದ್ದ ಬೋಪಣ್ಣ ಮತ್ತು ಅವರ ಕೆನಡಾದ ಜತೆಯಾಟಗಾರ್ತಿ ಗೇಬ್ರಿಯೇಲ ಡಬ್ರೋವ್‌ಸ್ಕಿ ಜತೆಗೆ ಸೋಲಿನ ಆಘಾತ ಅನುಭವಿಸಿದರು
ಸೆಮಿಫೈನಲ್ ಸುತ್ತಿನಲ್ಲಿ ಬಹುತೇಕ ಸಾನಿಯಾ-ಡೊಡಿಗ್ ಜೋಡಿ ಲಿಯಾಂಡರ್ ಪೇಸ್ ಮತ್ತು ಮಾರ್ಟಿನಾ ಹಿಂಗಿಸ್ ಜತೆ ಸೆಣಸುವ ಸಂಭವವಿದೆ.
ಇತ್ತ, ಭಾರತದ ಯುವ ಆಟಗಾರ್ತಿ ಜೀಲ್ ದೇಸಾಯಿ ಬಾಲಕಿಯರ ಸಿಂಗಲ್ಸ್‌ನಲ್ಲಿ ಕ್ವಾರ್ಟರ್‌ಫೈನಲ್‌ಗೆ ಕಾಲಿಟ್ಟರು.
