ಜೈಪುರದಲ್ಲಿ ಹಾಕಿ ಪಟು ಸಂದೀಪ್ ಮೇಣದ ಪ್ರತಿಮೆ
ಇಲ್ಲಿನ ನಹಾರ್‌ಗಢ ಕೋಟೆಯಲ್ಲಿರುವ ಜೈಪುರ ವ್ಯಾಕ್ಸ್ ಮ್ಯೂಸಿಯಂನಲ್ಲಿ ಭಾರತ ಹಾಕಿ ತಂಡದ ಮಾಜಿ ನಾಯಕ ಸಂದೀಪ್ ಸಿಂಗ್‌ರ ಮೇಣದ ಪ್ರತಿಮೆಯನ್ನು ಅಳವಡಿಸಲು ನಿರ್ಧರಿಸಲಾಗಿದೆ. ಈ ವಸ್ತು ಸಂಗ್ರಹಾಲಯದಲ್ಲಿ ಮಹಾತ್ಮ ಗಾಂಧಿ, ಸುಭಾಶ್ ಚಂದ್ರ ಬೋಸ್, ಅಮಿತಾಭ್ ಬಚ್ಚನ್, ಸಚಿನ್ ತೆಂಡುಲ್ಕರ್ ಸೇರಿದಂತೆ ಇನ್ನೂ ಅನೇಕ ಗಣ್ಯರ ಪ್ರತಿಮೆಗಳನ್ನು ಇರಿಸಲಾಗಿದೆ.
ಜೈಪುರ: ಇಲ್ಲಿನ ನಹಾರ್‌ಗಢ ಕೋಟೆಯಲ್ಲಿರುವ ಜೈಪುರ ವ್ಯಾಕ್ಸ್ ಮ್ಯೂಸಿಯಂನಲ್ಲಿ ಭಾರತ ಹಾಕಿ ತಂಡದ ಮಾಜಿ ನಾಯಕ ಸಂದೀಪ್ ಸಿಂಗ್‌ರ ಮೇಣದ ಪ್ರತಿಮೆಯನ್ನು ಅಳವಡಿಸಲು ನಿರ್ಧರಿಸಲಾಗಿದೆ. ಈ ವಸ್ತು ಸಂಗ್ರಹಾಲಯದಲ್ಲಿ ಮಹಾತ್ಮ ಗಾಂಧಿ, ಸುಭಾಶ್ ಚಂದ್ರ ಬೋಸ್, ಅಮಿತಾಭ್ ಬಚ್ಚನ್, ಸಚಿನ್ ತೆಂಡುಲ್ಕರ್ ಸೇರಿದಂತೆ ಇನ್ನೂ ಅನೇಕ ಗಣ್ಯರ ಪ್ರತಿಮೆಗಳನ್ನು ಇರಿಸಲಾಗಿದೆ.
ಆ ಸಾಲಿಗೆ ಸಂದೀಪ್ ಕೂಡ ಸೇರ್ಪಡೆ ಗೊಳ್ಳಲಿದ್ದಾರೆ. ‘ಇದೊಂದು ದೊಡ್ಡ ಗೌರವ. ಮ್ಯೂಸಿಯಂ ಅಧಿಕಾರಿಗಳು ನನ್ನನ್ನು ಎರಡೂವರೆ ತಿಂಗಳ ಹಿಂದೆ ಸಂಪರ್ಕಿಸಿ ಪ್ರಸ್ತಾಪವಿಟ್ಟಾಗ ಕೂಡಲೇ ಒಪ್ಪಿಕೊಂಡೆ. ಮುಂದಿನ ತಿಂಗಳು ಪ್ರತಿಮೆ ಅನಾವರಣಗೊಳ್ಳಲಿದೆ’ಎಂದು ಸಂದೀಪ್ ಸಿಂಗ್ ಸಂತಸವ್ಯಕ್ತಪಡಿಸಿದ್ದಾರೆ.
ಮುಂದಿನ ತಿಂಗಳು ಸಂದೀಪ್ ಸಿಂಗ್‌ರ ಜೀವನಾಧಾರಿತ ಸಿನಿಮಾ ‘ಸೂರ್ಮಾ’ತೆರೆ ಕಾಣಲಿದ್ದು, ಸಂದೀಪ್ ಉತ್ಸುಕರಾಗಿದ್ದಾರೆ.