ತಮ್ಮ ವೃತ್ತಿಜೀವನದ ಉಚ್ಛಾಯಪ್ರಾಯದಲ್ಲಿರುವ ಕೊಹ್ಲಿ, 2016ರಲ್ಲಿ ತಾವು ಆಡಿದ 10 ಟೆಸ್ಟ್ ಪಂದ್ಯಗಳಿಂದ 68.92 ಸರಾಸರಿಯಲ್ಲಿ 965 ರನ್ ಗಳಿಸಿದ್ದಾರೆ.

ನವದೆಹಲಿ(ಡಿ.01): "ಭಾರತೀಯ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಪಕ್ಕಾ ವೃತ್ತಿಪರ ಆಟಗಾರನಾಗಿದ್ದು ಪ್ರತಿ ಪಂದ್ಯಕ್ಕೂ ಅವರು ಪ್ರತ್ಯೇಕವಾಗಿ ತಯಾರಾಗಿಯೇ ಕಣಕ್ಕಿಳಿಯುತ್ತಾರೆ. ಹಾಗಾಗಿಯೇ ಅವರು ಭಾರತ ತಂಡದ ಅಭಿಮಾನಿಗಳಿಗೆ ಬೇಕಾದದ್ದನ್ನು ಕೊಡುತ್ತಾರೆ’’ ಎಂದು ಶ್ರೀಲಂಕಾ ಕ್ರಿಕೆಟ್‌ನ ದಂತಕತೆ ಸನತ್ ಜಯಸೂರ್ಯ ತಿಳಿಸಿದ್ದಾರೆ.

ತಮ್ಮ ವೃತ್ತಿಜೀವನದ ಉಚ್ಛಾಯಪ್ರಾಯದಲ್ಲಿರುವ ಕೊಹ್ಲಿ, 2016ರಲ್ಲಿ ತಾವು ಆಡಿದ 10 ಟೆಸ್ಟ್ ಪಂದ್ಯಗಳಿಂದ 68.92 ಸರಾಸರಿಯಲ್ಲಿ 965 ರನ್ ಗಳಿಸಿದ್ದಾರೆ.

ಈ ಸಾಧನೆಯಿಂದಾಗಿ, ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ ಬಿಡುಗಡೆಗೊಳಿಸಿರುವ ನೂತನ ಶ್ರೇಯಾಂಕ ಪಟ್ಟಿಯಲ್ಲಿ ಕೊಹ್ಲಿ 3ನೇ ಶ್ರೇಯಾಂಕಕ್ಕೇರಿದ್ದಾರೆ.