ಬ್ರಾಥ್‌ವೇಟ್, ಟೆಸ್ಟ್ ಬ್ಯಾಟ್ಸ್‌ಮನ್ ಡರೇನ್ ಬ್ರಾವೋ ಮತ್ತು ಮರ್ಲಾನ್ ಸ್ಯಾಮುಯೆಲ್ಸ್, 2017ರ ಸೆಪ್ಟೆಂಬರ್ ವರೆಗಿನ ವಿಂಡೀಸ್ ಮಂಡಳಿಯ ಒಪ್ಪಂದವನ್ನು ಒಪ್ಪಿಕೊಳ್ಳಲು ಹಿಂದೇಟು ಹಾಕಿದ್ದಾರೆ ಎಂದು ಕ್ರಿಕೆಟ್ ಬೋರ್ಡ್ ಸ್ಪಷ್ಟಪಡಿಸಿದೆ.
ನವದೆಹಲಿ(ನ.03): ವೆಸ್ಟ್ ಇಂಡೀಸ್ ಟಿ20 ತಂಡದ ನಾಯಕ ಕಾರ್ಲಸ್ ಬ್ರಾಥ್ವೇಟ್ ಸೇರಿದಂತೆ ಮೂವರು ಕ್ರಿಕೆಟಿಗರು, ವಿಂಡೀಸ್ ಕ್ರಿಕೆಟ್ ಮಂಡಳಿಯ ಕೇಂದ್ರಿಯ ಒಪ್ಪಂದಕ್ಕೆ ಸಹಿ ಹಾಕಲು ನಿರಾಕರಿಸಿದ್ದಾರೆ.
ಬ್ರಾಥ್ವೇಟ್, ಟೆಸ್ಟ್ ಬ್ಯಾಟ್ಸ್ಮನ್ ಡರೇನ್ ಬ್ರಾವೋ ಮತ್ತು ಮರ್ಲಾನ್ ಸ್ಯಾಮುಯೆಲ್ಸ್, 2017ರ ಸೆಪ್ಟೆಂಬರ್ ವರೆಗಿನ ವಿಂಡೀಸ್ ಮಂಡಳಿಯ ಒಪ್ಪಂದವನ್ನು ಒಪ್ಪಿಕೊಳ್ಳಲು ಹಿಂದೇಟು ಹಾಕಿದ್ದಾರೆ ಎಂದು ಕ್ರಿಕೆಟ್ ಬೋರ್ಡ್ ಸ್ಪಷ್ಟಪಡಿಸಿದೆ.
ಎರಡು ಬಾರಿ ವಿಂಡೀಸ್ ತಂಡಕ್ಕೆ ಟಿ20 ಟ್ರೋಫಿ ಜಯಿಸಿ ಕೊಟ್ಟಿದ್ದ ಡ್ಯಾರೇನ್ ಸಾಮಿ ಕೈಬಿಟ್ಟು, ಆಗಸ್ಟ್ನಲ್ಲಿ ಬ್ರಾಥ್ವೇಟ್ಗೆ ಟಿ20 ನಾಯಕತ್ವ ನೀಡಲಾಗಿತ್ತು. 28 ವರ್ಷ ವಯಸ್ಸಿನ ಬ್ರಾಥ್ವೇಟ್ ಏಕದಿನ ಮತ್ತು ಟೆಸ್ಟ್ ಸೇರಿದಂತೆ ಮೂರು ವಿಭಾಗಗಳಲ್ಲಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
