117 ವರ್ಷಗಳ ಹಿಂದೆ ಅಂದರೆ 1899ರಲ್ಲಿ ಓವಲ್`ನಲ್ಲಿ ಸರ್ರೆ ಬಾಬಿ ಅಬೆಲ್ ಔಟಾಗದೆ ಗಳಿಸಿದ್ದ 357 ರನ್ ಇದುವರೆಗಿನ ದಾಖಲೆಯಾಗಿತ್ತು. ರಣಜಿಯಲ್ಲಿ ಅತೀ ಹೆಚ್ಚು ರನ್​​​ ಗಳಿಸಿದ ಕೀರ್ತಿಗೆ ಪಾತ್ರರಾಗಿರುವ ಗೊಹೆಲ್, ಪ್ರಥಮ ದರ್ಜೆಯಲ್ಲಿ  ಆರಂಭಿಕನಾಗಿ ತ್ರಿಶತಕ ಸಿಡಿಸಿದ ಆಟಗಾರನೊಬ್ಬ ತನ್ನ ತಂಡದ  ಇನ್ನಿಂಗ್ಸ್​​​​​ ಪೂರ್ಣಗೊಳಿಸಿದ 4ನೇ ಆಟಗಾರ ಎನ್ನಿಸಿಕೊಂಡಿದ್ದಾರೆ.

ಜೈಪುರ(ಡಿ.27): ಜೈಪುರದಲ್ಲಿ ನಡೆಯುತ್ತಿರುವ ಒರಿಸ್ಸಾ ವಿರುದ್ಧದ ರಣಜಿ ಕ್ವಾರ್ಟರ್​​​​ ಫೈನಲ್`ನಲ್ಲಿ ಗುಜರಾತ್`​​​ನ ಆರಂಭಿಕ ಬ್ಯಾಟ್ಸ್​`​ಮನ್​​​ ಸಮಿತ್​​​​ ಗೊಹೆಲ್​​​​​​​ ಔಟಾಗದೆ 359 ರನ್`​​​ಗಳನ್ನ ಸಿಡಿಸುವ ಮೂಲಕ ವಿಶ್ವದಾಖಲೆ ಬರೆದಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್`ನಲ್ಲಿ ಆರಂಭಿಕರಾಗಿ ಅತ್ಯಧಿಕ ರನ್ ಸಿಡಿಸಿದ ಸಾಧನೆ ಮಾಡಿದ್ದಾರೆ.

117 ವರ್ಷಗಳ ಹಿಂದೆ ಅಂದರೆ 1899ರಲ್ಲಿ ಓವಲ್`ನಲ್ಲಿ ಸರ್ರೆ ಬಾಬಿ ಅಬೆಲ್ ಔಟಾಗದೆ ಗಳಿಸಿದ್ದ 357 ರನ್ ಇದುವರೆಗಿನ ದಾಖಲೆಯಾಗಿತ್ತು. ರಣಜಿಯಲ್ಲಿ ಅತೀ ಹೆಚ್ಚು ರನ್​​​ ಗಳಿಸಿದ ಕೀರ್ತಿಗೆ ಪಾತ್ರರಾಗಿರುವ ಗೊಹೆಲ್, ಪ್ರಥಮ ದರ್ಜೆಯಲ್ಲಿ ಆರಂಭಿಕನಾಗಿ ತ್ರಿಶತಕ ಸಿಡಿಸಿದ ಆಟಗಾರನೊಬ್ಬ ತನ್ನ ತಂಡದ ಇನ್ನಿಂಗ್ಸ್​​​​​ ಪೂರ್ಣಗೊಳಿಸಿದ 4ನೇ ಆಟಗಾರ ಎನ್ನಿಸಿಕೊಂಡಿದ್ದಾರೆ.

ಸಮಿತ್​​​​ ಗೊಹೆಲ್​​​​​​​ 723 ಎಸೆತಗಳಲ್ಲಿ 45 ಬೌಂಡರಿ ಹಾಗೂ 1 ಸಿಕ್ಸರ್ ​​​​ಸಹಿತ 359 ರನ್​​ ಗಳಿಸಿ ದಾಖಲೆ ಬರದಿದ್ದಾರೆ.