ಐಪಿಎಲ್‌ ತಂಡಗಳ ತರಬೇತುದಾರರು ಹಾಗೂ ಸಲಹೆಗಾರರ ವೇತನ ಕುರಿತ ಮಾಹಿತಿ ಬಹಿರಂಗಗೊಂಡಿದ್ದು, ಡೆಲ್ಲಿ ಡೇರ್‌ಡೆವಿಲ್ಸ್‌ ತಂಡದ ಸಲಹೆಗಾರರಾಗಿದ್ದ ರಾಹುಲ್‌ ದ್ರಾವಿಡ್‌ ವರ್ಷಕ್ಕೆ. 4.5 ಕೋಟಿ ವೇತನ ಪಡೆಯಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ, ಮುಂಬೈ ಇಂಡಿಯನ್ಸ್‌ ತಂಡದ ಐಕಾನ್‌ ಆಗಿರುವ ಸಚಿನ್‌ ತೆಂಡುಲ್ಕರ್‌ ಎಲ್ಲರಿಗಿಂತ ಅಧಿಕ ವೇತನ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿದೆ.

ಮುಂಬೈ(ಮೇ.21): ಐಪಿಎಲ್‌ ತಂಡಗಳ ತರಬೇತುದಾರರು ಹಾಗೂ ಸಲಹೆಗಾರರ ವೇತನ ಕುರಿತ ಮಾಹಿತಿ ಬಹಿರಂಗಗೊಂಡಿದ್ದು, ಡೆಲ್ಲಿ ಡೇರ್‌ಡೆವಿಲ್ಸ್‌ ತಂಡದ ಸಲಹೆಗಾರರಾಗಿದ್ದ ರಾಹುಲ್‌ ದ್ರಾವಿಡ್‌ ವರ್ಷಕ್ಕೆ. 4.5 ಕೋಟಿ ವೇತನ ಪಡೆಯಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ, ಮುಂಬೈ ಇಂಡಿಯನ್ಸ್‌ ತಂಡದ ಐಕಾನ್‌ ಆಗಿರುವ ಸಚಿನ್‌ ತೆಂಡುಲ್ಕರ್‌ ಎಲ್ಲರಿಗಿಂತ ಅಧಿಕ ವೇತನ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿದೆ.

ಸಚಿನ್‌ ಕೇವಲ ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯಗಳ ವೇಳೆ ಮಾತ್ರ ತಂಡದೊಂದಿಗೆ ಕ್ರೀಡಾಂಗಣದಲ್ಲಿ ಹಾಜರಿರುತ್ತಾರೆ. ತಂಡದೊಂದಿಗೆ ಪ್ರಯಾಣ ಬೆಳೆಸುವುದಿಲ್ಲ. ಕೇವಲ ಡಗೌಟ್‌ನಲ್ಲಿ ಕೂರಲು ಸಚಿನ್‌, ಉಳಿದೆಲ್ಲಾ ಕೋಚ್‌ಗಳಿಗಿಂತ ಹೆಚ್ಚು ಸಂಭಾವನೆ ಪಡೆಯಲಿದ್ದಾರೆ ಎನ್ನುವುದು ಭಾರೀ ಚರ್ಚೆಗೆ ಕಾರಣವಾಗಿದೆ.

ಆರ್‌ಸಿಬಿಯ ಡ್ಯಾನಿಯಲ್‌ ವೆಟೋರಿ, ಕೆಕೆಆರ್‌ನ ಸಲಹೆಗಾರರಾದ ಜಾಕ್‌ ಕಾಲಿಸ್‌ಗೆ ವರ್ಷಕ್ಕೆ 3.5 ಕೋಟಿ ವೇತನ ನೀಡಲಾಗುತ್ತಿದೆ. ಪಂಜಾಬ್‌, ಮುಂಬೈ, ಹೈದರಾಬಾದ್‌, ಪುಣೆ ತಂಡದ ಸಲಹೆಗಾರರಾದ ವೀರೇಂದ್ರ ಸೆಹ್ವಾಗ್‌, ಮಹೇಲಾ ಜಯವರ್ಧನೆ, ಟಾಮ್‌ ಮೋಡಿ, ಸ್ಟೀಫನ್‌ ಫ್ಲೆಮಿಂಗ್‌ಗೆ ವರ್ಷಕ್ಕೆ 2.3ರಿಂದ 3 ಕೋಟಿ ವೇತನ ನೀಡಲಾಗುತ್ತಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. 2 ವರ್ಷಗಳ ಹಿಂದೆ ಆಸ್ಪ್ರೇಲಿಯಾ ಕ್ರಿಕೆಟ್‌ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್‌, ಮುಂಬೈ ತಂಡದ ತರಬೇತುದಾರರಾಗಿದ್ದರು. ಆಗಲೇ ಅವರಿಗೆ ವರ್ಷಕ್ಕೆ . 4.5 ಕೋಟಿ ವೇತನ ನೀಡಲಾಗುತ್ತಿತ್ತು ಎಂಬ ಸುದ್ದಿ ಎಲ್ಲರ ಅಚ್ಚರಿಗೆ ಕಾರಣವಾಗಿದೆ.