ವಿನೀತ್ ಪೊಗಾಟ್ ಹೊರತು ಪಡಿಸಿ ಉಳಿದ ಪೋಗಾತ್ ಸಹೋದರಿಯರಾದ ಗೀತಾ ಹಾಗೂ ಬಬಿತಾ ಪೊಗಾತ್ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದಾರೆ.

ಲಖನೌ(ಜು.07): ಮುಂದಿನ ತಿಂಗಳು ಪ್ಯಾರೀಸ್'ನಲ್ಲಿ ನಡೆಯಲಿರುವ ವಿಶ್ವ ಮಹಿಳಾ ಕುಸ್ತಿ ಚಾಂಪಿಯನ್‌'ಶಿಪ್‌ಗಾಗಿ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಒಲಿಂಪಿಕ್ ಪದಕ ವಿಜೇತೆ ಸಾಕ್ಷಿ ಮಲ್ಲಿಕ್ ಮತ್ತು ವಿನೀಶ್ ಪೊಗಾಟ್ ಸ್ಥಾನ ಪಡೆದಿದ್ದಾರೆ.

ಇಂದು ಭಾರತ ಕುಸ್ತಿ ಫೆಡರೇಷನ್ ವಿಶ್ವ ಮಹಿಳಾ ಚಾಂಪಿಯನ್'ಶಿಪ್'ಗೆ ತಂಡವನ್ನು ಪ್ರಕಟಿಸಿತು.

ರಿಯೊ ಒಲಿಂಪಿಕ್ಸ್‌'ನ 58 ಕೆಜಿ ವಿಭಾಗದಲ್ಲಿ ಕಂಚು ಜಯಿಸಿದ್ದ ಸಾಕ್ಷಿ ಮಲಿಕ್, ಕಳೆದ ಮೇ ತಿಂಗಳಲ್ಲಿ ನಡೆದಿದ್ದ ಏಷ್ಯಾ ಚಾಂಪಿಯನ್‌'ಶಿಪ್‌'ನಲ್ಲಿ 60 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.

ಮುಂಬರುವ ಚಾಂಪಿಯನ್‌'ಶಿಪ್‌'ನಲ್ಲಿ ಸಾಕ್ಷಿ 60 ಕೆಜಿ ವಿಭಾಗದಲ್ಲಿ ಅರ್ಹತೆ ಪಡೆದಿದ್ದಾರೆ.

ವಿನೀಶ್ ಗಾಯದಿಂದ ಚೇತರಿಸಿಕೊಂಡು ಮತ್ತೆ ಭಾರತ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಸಫಲರಾಗಿದ್ದಾರೆ. ವಿಶ್ವ ಚಾಂಪಿಯನ್‌'ಶಿಪ್‌'ನಲ್ಲಿ ವಿನೇಶಾ 48 ಕೆಜಿ ವಿಭಾಗದಲ್ಲಿ ಅರ್ಹತೆ ಪಡೆದಿದ್ದಾರೆ.

ವಿನೀತ್ ಪೊಗಾಟ್ ಹೊರತು ಪಡಿಸಿ ಉಳಿದ ಪೋಗಾತ್ ಸಹೋದರಿಯರಾದ ಗೀತಾ ಹಾಗೂ ಬಬಿತಾ ಪೊಗಾತ್ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದಾರೆ.