ದಸರಾ ಕ್ರೀಡಾಕೂಟಕ್ಕೆ ಒಲಿಂಪಿಕ್ಸ್ ಪದಕ ವಿಜೇತೆ ಸಾಕ್ಷಿ ಮಲ್ಲಿಕ್ ಚಾಲನೆ
ದಸರಾ ಕ್ರೀಡಾಕೂಟಕ್ಕೆ ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಸಾಕ್ಷಿ ಮಲಿಕ್ ಚಾಲನೆ
ಮೊದಲ ಬಾರಿಗೆ ಮೈಸೂರಿಗೆ ಆಗಮಿಸಿದ ಸಾಕ್ಷಿ ಮಲಿಕ್
ರಾಜ್ಯ ಮಟ್ಟದ ಮುಖ್ಯಮಂತ್ರಿ ಕಪ್ 2022 ಕ್ರೀಡಾಕೂಟಕ್ಕೆ ಸಾಕ್ಷಿ ಮಲಿಕ್ ಚಾಲನೆ
ಮೈಸೂರು(ಸೆ.30) ರಾಜ್ಯ ಮಟ್ಟದ ಮುಖ್ಯಮಂತ್ರಿ ಕಪ್ 2022ರ ದಸರಾ ಕ್ರೀಡಾಕೂಟಕ್ಕೆ ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಸಾಕ್ಷಿ ಮಲಿಕ್ ಗುರುವಾರ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಸಾಕ್ಷಿ, ಕುಸ್ತಿ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಆಗಮಿಸುವ ಮಹಿಳಾ ಕುಸ್ತಿಪಟುಗಳು ಮೂಲಭೂತ ಸೌಲಭ್ಯದ ಕೊರತೆ ಅನುಭವಿಸುತ್ತಿದ್ದಾರೆ. ಅವರಿಗಾಗಿ ಕರ್ನಾಟಕ ಸರ್ಕಾರ ಮೈಸೂರಿನಲ್ಲಿ ಕುಸ್ತಿ ಶಾಲೆ ಮತ್ತು ಹಾಸ್ಟೆಲ್ ತೆರೆಯಬೇಕು ಎಂದು ಮನವಿ ಮಾಡಿದರು.
‘ಒಂದು ಕಾಲಕ್ಕೆ ನಾನೂ ಇದೇ ರೀತಿ ಕ್ರೀಡಾಕೂಟಗಳಲ್ಲಿ ಕುಳಿತು ಅತಿಥಿಗಳ ಭಾಷಣ ಕೇಳುತ್ತಿದ್ದೆ. ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡು ಪದಕ ಗೆಲ್ಲಬೇಕು ಎಂಬ ಆಸೆ ಇತ್ತು. ಆ ಆಸೆ ಈಡೇರಿದೆ. ಜೀವನದಲ್ಲಿ ಶಿಸ್ತು ಮತ್ತು ಗುರಿ ಇದ್ದರೆ ಸಾಧನೆ ಸಾಧ್ಯ’ ಎಂದರು. ‘ಮೈಸೂರಿಗೆ ಇದೇ ಮೊದಲ ಬಾರಿಗೆ ಬರುತ್ತಿದ್ದೇನೆ. ಇಲ್ಲಿ ತುಂಬಾ ಪ್ರೀತಿ ವಿಶ್ವಾಸದಿಂದ ಕಂಡಿದ್ದಾರೆ. ದಸರಾ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತಿರುವುದು ಸಂತೋಷವಾಗಿದೆ’ ಎಂದು ಅವರು ಹೇಳಿದರು.
ರಾಜ್ಯದ ಗೌತಮ್ ಮೋಟಾರ್ ಸ್ಪೋರ್ಟ್ಸ್ ಫೆಡರೇಷನ್ ಉಪಾಧ್ಯಕ್ಷ
ಚೆನ್ನೈ: ಭಾರತೀಯ ಮೋಟಾರ್ ಸ್ಪೋಟ್ಸ್‌ರ್ ಫೆಡರೇಷನ್(ಎಫ್‌ಎಂಎಸ್‌ಸಿಐ) ಉಪಾಧ್ಯಕ್ಷರಾಗಿ ಕರ್ನಾಟಕದ ಗೌತಮ್ ಬಿ ಶಾಂತಪ್ಪ ಆಯ್ಕೆಯಾಗಿದ್ದಾರೆ. ಇವರು ಕರ್ನಾಟಕ ಮೋಟಾರ್ ಸ್ಪೋರ್ಟ್ಸ್ ಕ್ಲಬ್‌ನ ಸದಸ್ಯರಾಗಿದ್ದಾರೆ. ಇದೇ ವೇಳೆ ಅಧ್ಯಕ್ಷರಾಗಿ ಅಕ್ಬರ್ ಇಬ್ರಾಹಿಂ ಮರು ಆಯ್ಕೆಯಾಗಿದ್ದಾರೆ. ಇದು ಅವರ 3ನೇ ಅವಧಿ. ಈ ಹಿಂದೆ 2016-18, 2020-22ರ ಅವಧಿಯಲ್ಲೂ ಅವರು ಅಧ್ಯಕ್ಷರಾಗಿ ಕಾರ‍್ಯನಿರ್ವಹಿಸಿದ್ದರು.
ಅಂಚೆ ವಾಲಿಬಾಲ್ ಟೂರ್ನಿ: ಸೆಮಿಫೈನಲ್‌ಗೆ ಕರ್ನಾಟಕ
ಬೆಂಗಳೂರು: 35ನೇ ಅಖಿಲ ಭಾರತ ಅಂಚೆ ವಾಲಿಬಾಲ್ ಪಂದ್ಯಾವಳಿಯ ಸೆಮಿಫೈನಲ್‌ಗೆ ಕರ್ನಾಟಕ ತಂಡ ಪ್ರವೇಶಿಸಿದೆ. ಗುರುವಾರ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಕರ್ನಾಟಕ ತಂಡ ಮಹಾರಾಷ್ಟ್ರ ವಿರುದ್ಧ 25-10, 25-12, 25-16 ನೇರ ಸೆಟ್‌ಗಳಲ್ಲಿ ಜಯಗಳಿಸಿತು.
National Games 2022 ಸ್ವಜನಪಕ್ಷಪಾತ, ಭ್ರಷ್ಟಾಚಾರದಿಂದ ಕ್ರೀಡೆ ಈಗ ಮುಕ್ತವಾಗಿದೆ: ಮೋದಿ
ಒಡಿಶಾ ವಿರುದ್ಧ ಗೆದ್ದ ಹಿಮಾಚಲ ಪ್ರದೇಶ, ಆಂಧ್ರ ಪ್ರದೇಶ ವಿರುದ್ಧ ಗೆದ್ದ ಪಶ್ಚಿಮ ಬಂಗಾಳ, ರಾಜಸ್ಥಾನ ವಿರುದ್ಧ ಗೆದ್ದ ಕೇರಳ ತಂಡಗಳು ಸಹ ಸೆಮೀಸ್‌ಗೇರಿದವು. ಶುಕ್ರವಾರ ಪಂದ್ಯಾವಳಿಯ ಅಂತಿಮ ದಿನವಾಗಿದ್ದು ಸೆಮಿಫೈನಲ್‌ನಲ್ಲಿ ಕರ್ನಾಟಕಕ್ಕೆ ಪಶ್ಚಿಮ ಬಂಗಾಳ, ಹಿಮಾಚಲ ಪ್ರದೇಶಕ್ಕೆ ಕೇರಳ ತಂಡ ಎದುರಾಗಲಿದೆ. ಸಂಜೆ ಫೈನಲ್ ನಡೆಯಲಿದೆ.
5ನೇ ಟಿ20: ಇಂಗ್ಲೆಂಡ್ ವಿರುದ್ಧ ಗೆದ್ದ ಪಾಕಿಸ್ತಾನ
ಲಾಹೋರ್: ಚೊಚ್ಚಲ ಪಂದ್ಯದಲ್ಲೇ ಆಕರ್ಷಕ ಕೊನೆ ಓವರ್ ಬೌಲ್ ಮಾಡಿದ ಆಮಿರ್ ಜಮಾಲ್ ಇಂಗ್ಲೆಂಡ್ ವಿರುದ್ದ 5ನೇ ಟಿ20 ಪಂದ್ಯದಲ್ಲಿ ಪಾಕಿಸ್ತಾನಕ್ಕೆ 6 ರನ್ ಗೆಲುವು ತಂದುಕೊಟ್ಟಿದ್ದಾರೆ. ಇದರೊಂದಿಗೆ 7 ಪಂದ್ಯಗಳ ಸರಣಿಯಲ್ಲಿ ಪಾಕಿಸ್ತಾನ 3-2ರ ಮುನ್ನಡೆ ಪಡೆದಿದೆ.
ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 19 ಓವರಲ್ಲಿ 145 ರನ್‌ಗೆ ಆಲೌಟ್ ಆಯಿತು. ಇಂಗ್ಲೆಂಡ್ 85 ರನ್‌ಗೆ 5 ವಿಕೆಟ್ ಕಳೆದುಕೊಂಡಿತ್ತು. ಮೋಯಿನ್ ಅಲಿ(ಔಟಾಗದೆ 51) ಅವರ ಹೋರಾಟ ತಂಡವನ್ನು ಗೆಲುವಿನ ಹೊಸ್ತಿಲಿಗೆ ತಂದು ನಿಲ್ಲಿಸಿತು. ಕೊನೆ ಓವರಲ್ಲಿ ಗೆಲ್ಲಲು 15 ರನ್ ಬೇಕಿತ್ತು. ಆದರೆ ಇಂಗ್ಲೆಂಡ್ 8 ರನ್ ಗಳಿಸಲಷ್ಟೇ ಶಕ್ತವಾಯಿತು.