23 ವರ್ಷದ ಸಾಕ್ಷಿ ಮಲಿಕ್‌‌ಇದೇ ವರ್ಷ ತನಗಿಂತ ಒಂದು ವರ್ಷ ಚಿಕ್ಕವನಾಗಿರುವ ಕುಸ್ತಿಪಟು ಸತ್ಯವೃತ್ ಕಾದಿಯಾನ್‌ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. 

ರೋಹ್ಟಕ್(ಅ.17): ಈ ಬಾರಿಯ ರಿಯೋ ಒಲಿಂಪಿಕ್ಸ್‌‌ನಲ್ಲಿ ಭಾರತಕ್ಕೆ ಪದಕ ತಂದುಕೊಟ್ಟಿರುವ ಕುಸ್ತಿಪಟು ಸಾಕ್ಷಿ ಮಲಿಕ್‌‌‌‌‌‌‌ಈ ವರ್ಷವೇ ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ. 

ಕುಸ್ತಿಪಟು ಸತ್ಯವೃತ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ರೋಹ್ಟಕ್‌ನಲ್ಲಿ ಇವರಿಬ್ಬರ ನಿಶ್ಚಿತಾರ್ಥ ನಡೆದಿದ್ದು, ಆದಷ್ಟು ಬೇಗ ಮದುವೆ ದಿನಾಂಕ ಘೋಷಣೆ ಮಾಡಲಾಗುವುದು ಅಂತಾ ಕುಟುಂಬಸ್ಥರು ತಿಳಿಸಿದ್ದಾರೆ. 

23 ವರ್ಷದ ಸಾಕ್ಷಿ ಮಲಿಕ್‌‌ಇದೇ ವರ್ಷ ತನಗಿಂತ ಒಂದು ವರ್ಷ ಚಿಕ್ಕವನಾಗಿರುವ ಕುಸ್ತಿಪಟು ಸತ್ಯವೃತ್ ಕಾದಿಯಾನ್‌ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.