Asianet Suvarna News Asianet Suvarna News

ಧೋನಿ-ಸಾಕ್ಷಿ ಮದುವೆಯಾಗಲು ರಾಬಿನ್ ಉತ್ತಪ್ಪ ಕಾರಣ!

ಟೀಂ ಇಂಡಿಯಾ ಕ್ರಿಕೆಟಿಗ ಎಂ.ಎಸ್.ಧೋನಿ ಹಾಗೂ ಪತ್ನಿ ಸಾಕ್ಷಿ ಧೋನಿ ಲವ್  ಸ್ಟೋರಿ ಯಾರಿಗೆ ತಾನೆ ಗೊತ್ತಿಲ್ಲ. ಎಂ.ಎಸ್.ಧೋನಿ, ದಿ ಅನ್‌ಟೋಲ್ಡ್ ಸ್ಟೋರಿ ಬಾಲಿವುಡ್ ಚಿತ್ರದ ಮೂಲಕ ಧೋನಿ ಪ್ರೇಮ್ ಕಹಾನಿ ವಿಶ್ವಕ್ಕೆ ತಿಳಿದಿದೆ. ಆದರೆ ಇದರಲ್ಲೂ ಹೇಳದ ಮತ್ತೊಂದು ರಹಸ್ಯ ಇದೀಗ ಬಯಲಾಗಿದೆ. 
 

Sakshi Dhoni names the cricketer who brought her and MS Dhoni together
Author
Bengaluru, First Published Nov 22, 2018, 12:37 PM IST
  • Facebook
  • Twitter
  • Whatsapp

ಮುಂಬೈ(ನ.22): ಟೀಂ ಇಂಡಿಯಾ ಕ್ರಿಕೆಟಿಗ ಎಂ.ಎಸ್.ಧೋನಿ ಹಾಗೂ ಸಾಕ್ಷಿ ಧೋನಿ ಮದುವೆಯಾಗಿ 8 ವರ್ಷಗಳೇ ಉರುಳಿದೆ. ಧೋನಿ ಹಾಗೂ ಸಾಕ್ಷಿ ನಡುವಿನ ಲವ್ ಸ್ಟೋರಿ ಈಗ ರಹಸ್ಯವಾಗಿ ಏನು ಉಳಿದಿಲ್ಲ. ಎಂ.ಎಸ್.ಧೋನಿ, ದಿನ ಅನ್‌ಟೋಲ್ಡ್ ಸ್ಟೋರಿಯಲ್ಲಿ ಧೋನಿ ಪ್ರೇಮ್ ಕಹಾನಿಯನ್ನ ಬಿಚ್ಚಿಡಲಾಗಿದೆ.

ಧೋನಿ ಬಯೋಪಿಕ್‌ನಲ್ಲಿ ಇಲ್ಲದೆ ಇರುವ ಮತ್ತೊಂದು ರಹಸ್ಯ ಇದೀಗ ಬಯಲಾಗಿದೆ. ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ ಎಂ.ಎಸ್.ಧೋನಿ ಹೊಟೆಲ್‌ನಲ್ಲಿ ಇಂಟರ್ನಿಯಾಗಿದ್ದ ಸಾಕ್ಷಿ ಸಿಂಗ್ ರಾವತ್ ನಡುವಿನ ಪ್ರೀತಿ ಕತೆಯನ್ನ ಚಿತ್ರದಲ್ಲಿ ಹೇಳಲಾಗಿದೆ. ಆದರೆ ಇವರಿಬ್ಬರು ಮದುವೆಯಾಗಲು ಕಾರಣ ಕನ್ನಡಿಗ ರಾಬಿನ್ ಉತ್ತಪ್ಪ ಕಾರಣ ಅನ್ನೋದು ಇದೀಗ ಬಹಿರಂಗವಾಗಿದೆ.

 

 

ಧೋನಿ ಹಾಗೂ ಸಾಕ್ಷಿ ಜೊತೆಯಾಗಲು ಮುಖ್ಯ ಕಾರಣ ಉತ್ತಪ್ಪ ಅನ್ನೋದನ್ನ ಸ್ವತಃ ಸಾಕ್ಷಿ ಧೋನಿ ಬಹಿರಂಗ ಪಡಿಸಿದ್ದಾರೆ. ಇತ್ತೀಚೆಗೆ ಸಾಕ್ಷಿ ಧೋನಿ ತಮ್ಮ 30ನೇ ವರ್ಷದ ಹುಟ್ಟುಹಬ್ಬವನ್ನ ಮುಂಬೈನಲ್ಲಿ ಅದ್ಧೂರಿಯಾಗಿ ಆಚರಿಸಿಕೊಂಡಿದ್ದರು.  ಬರ್ತ್‌ಡೇ ಪಾರ್ಟಿಗೆ ಆಗಮಿಸಿದ ರಾಬಿನ್ ಉತ್ತಪ್ಪ ಹಾಗೂ ಪತ್ನಿ ಶೀತಲ್ ಗೌತಮ್ ಜೊತೆಗಿನ ಫೋಟೋ ಅಪ್‌ಲೋಡ್ ಮಾಡಿ ರಹಸ್ಯವನ್ನ ಬಿಚ್ಟಿಟ್ಟಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಫೋಟೋ ಪೋಸ್ಟ್ ಮಾಡಿರುವ ಸಾಕ್ಷಿ, ನಾನು, ಧೋನಿ ಜೊತೆಯಾಗಿರಲು ಈತ ಕಾರಣ, ಧನ್ಯವಾದ ಎಂದಿದ್ದಾರೆ. ಇನ್ನು ಪಾರ್ಟಿಗೆ ಆಗಮಿಸಿದ ರಾಬಿನ್ ಉತ್ತಪ್ಪ ಹಾಗೂ ಶೀತಲ್ ಗೌತಮ್‌ಗೆ ವಿಶೇಷವಾಗಿ ಧನ್ಯವಾದ ಹೇಳಿದ್ದಾರೆ.

ಸಾಕ್ಷಿ ಧೋನಿ ಈ ಪೋಸ್ಟ್ ಇದೀಗ ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಧೋನಿ ಬಯೋಪಿಕ್ ಆಚೆಗೂ ಹಲವು ರಹಸ್ಯಗಳಿವೆ. ಅದರಲ್ಲೂ ಧೋನಿ ಹಾಗೂ ಸಾಕ್ಷಿ ನಡುವಿನ ಪ್ರೀತಿ, ಮದುವೆ ಕುರಿತು ಸಾಕಷ್ಟು ಮಾಹಿತಿಗಳನ್ನ ಚಿತ್ರದಲ್ಲಿ ನೀಡಿಲ್ಲ ಅನ್ನೋದು ಇದೀಗ ಮನದಟ್ಟಾಗಿದೆ.

Follow Us:
Download App:
  • android
  • ios