2011ರಲ್ಲಿ ಭಾರತಕ್ಕೆ ವಿಶ್ವಕಪ್ ತಂದುಕೊಟ್ಟಿದ್ದ ಧೋನಿ, 2015ರ ವಿಶ್ವಕಪ್ ಸೆಮಿಫೈನಲ್'ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದಿತ್ತು.

ಮುಂಬೈ(ಅ.22): ಧೋನಿ ಪತ್ನಿ ಸಾಕ್ಷಿ ಅವರು ತಮ್ಮ ಮಗಳಿಗೆ ಜನ್ಮ ನೀಡಿದ ಸಂದರ್ಭದಲ್ಲಿ ಧೋನಿ ಆಸ್ಟ್ರೇಲಿಯಾದಲ್ಲಿ ವಿಶ್ವಕಪ್ ಆಡುತ್ತಿದ್ದರು. ಈ ವೇಳೆ ಅವರ ಬಳಿ ಫೋನ್ ಇರಲಿಲ್ಲ. 2015ರ ಫೆ.6ರಂದು ಸಾಕ್ಷಿ, ಝೀವಾಗೆ ಜನ್ಮ ನೀಡಿದರು.

ತಾವು ಮಗಳಿಗೆ ಜನ್ಮ ನೀಡಿದ ವಿಚಾರವನ್ನು ಸುರೇಶ್ ರೈನಾಗೆ ಮೆಸೇಜ್ ಮಾಡಿದ ಸಾಕ್ಷಿ, ಇದನ್ನು ಧೋನಿ ತಿಳಿಸುವಂತೆ ಹೇಳಿದ್ದರು ಎಂಬ ಸಂಗತಿ ಇದೀಗ ಬೆಳಕಿಗೆ ಬಂದಿದೆ. ಈ ಮೂಲಕ ಕ್ರಿಕೆಟ್ ಮೇಲಿನ ಧೋನಿ ಬದ್ಧತೆ ಹೇಗಿತ್ತು ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

Scroll to load tweet…

ಆ ವೇಳೆ ಪ್ರತಿಕ್ರಿಯಿಸಿದ್ದ ಧೋನಿ, ‘ತಮಗೆ ವೈಯಕ್ತಿಕ ವಿಚಾರಗಳಿಗಿಂತ, ದೇಶ ಸೇವೆ ಮುಖ್ಯ’ ಎಂದಿದ್ದರು. 2011ರಲ್ಲಿ ಭಾರತಕ್ಕೆ ವಿಶ್ವಕಪ್ ತಂದುಕೊಟ್ಟಿದ್ದ ಧೋನಿ, 2015ರ ವಿಶ್ವಕಪ್ ಸೆಮಿಫೈನಲ್'ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದಿತ್ತು.