ಸೈನಾ ಹಾಗೂ ಸಿಂಧು ಎರಡು ಬಾರಿ ಅಂತರಾಷ್ಟ್ರೀಯ ಟೂರ್ನಿಯಲ್ಲಿ ಮುಖಾಮುಖಿಯಾಗಿದ್ದು, ಇಬ್ಬರೂ ಒಮ್ಮೊಮ್ಮೆ ಜಯದ ನಗೆ ಬೀರಿದ್ದಾರೆ. ಇನ್ನು ಕಳೆದ ವರ್ಷದ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್'ಶಿಪ್'ನಲ್ಲಿ ಸಿಂಧುಗೆ ಶಾಕ್ ನೀಡಿ ಸೈನಾ ನೆಹ್ವಾಲ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು.

ಜಕಾರ್ತ(ಜ.25): ಇಂಡೋನೇಷ್ಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್ ಪಂದ್ಯಾವಳಿಯ ಮಹಿಳಾ ಸಿಂಗಲ್ಸ್ ಕ್ವಾರ್ಟರ್ ಫೈನಲ್‌'ಗೆ ಭಾರತದ ಸೈನಾ ನೆಹ್ವಾಲ್ ಹಾಗೂ ಪಿ.ವಿ.ಸಿಂಧು ಪ್ರವೇಶಿಸಿದ್ದಾರೆ.

ಸೆಮಿಫೈನಲ್‌'ನಲ್ಲಿ ಸ್ಥಾನಕ್ಕಾಗಿ ಸೈನಾ ಹಾಗೂ ಸಿಂಧು ನಡುವೆಯೇ ಪೈಪೋಟಿ ನಡೆಯಲಿದೆ. ಎರಡನೇ ಸುತ್ತಿನ ಪಂದ್ಯದಲ್ಲಿ ಸೈನಾ, ಚೀನಾದ ಚೆನ್ ವಿರುದ್ಧ 21-12, 21-18ರಲ್ಲಿ ಗೆದ್ದರೆ, ಸಿಂಧು ಮಲೇಷ್ಯಾದ ಗೊ ಜಿನ್ ವಿರುದ್ಧ 21-12, 21-9ರಲ್ಲಿ ಜಯಗಳಿಸಿದರು.