ಮಲೇಷ್ಯಾ ಸೂಪರ್ ಸೀರಿಸ್‌ನ ಮೊದಲ ಸುತ್ತಿನಲ್ಲೇ ನಿರ್ಗಮಿಸಿದ್ದ ಪಿ.ವಿ. ಸಿಂಧು ಭಾರತೀಯ ಸವಾಲನ್ನು ಮುನ್ನಡೆಸಲಿದ್ದಾರೆ.
ಸಿಂಗಾಪುರ್(ಏ.10): ಲಂಡನ್ ಒಲಿಂಪಿಕ್ ಕಂಚಿನ ಪದಕ ವಿಜೇತೆ ಭಾರತದ ಸೈನಾ ನೆಹ್ವಾಲ್ ಮಂಗಳವಾರದಿಂದ ಆರಂಭಗೊಳ್ಳುತ್ತಿರುವ ಸಿಂಗಾಪುರ ಸೂಪರ್ ಸೀರಿಸ್ ಬ್ಯಾಡ್ಮಿಂಟನ್'ನಿಂದ ಹಿಂದೆಸರಿದಿದ್ದಾರೆ.
ಬಿಡುವಿಲ್ಲದ ವೇಳಾಪಟ್ಟಿಯಿಂದ ಬಳಲಿರುವ ಸೈನಾ, ಮುಂದಿನ ಟೂರ್ನಿಗಳಿಗೆ ಆಟದ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಲು ಅಭ್ಯಾಸ ನಡೆಸುವ ಸಲುವಾಗಿ ಈ ನಿರ್ಧಾರ ತಳೆದಿದ್ದಾಗಿ ತಿಳಿಸಿದ್ದಾರಲ್ಲದೆ, ಇದೇ ತಿಂಗಳು ಚೀನಾದಲ್ಲಿ ನಡೆಯಲಿರುವ ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್'ಶಿಪ್'ನಲ್ಲಿ ಕಣಕ್ಕಿಳಿಯುವುದಾಗಿ ಖಚಿತಪಡಿಸಿದ್ದಾರೆ.
ಇದೇ ವೇಳೆ ಮಲೇಷ್ಯಾ ಸೂಪರ್ ಸೀರಿಸ್ನ ಮೊದಲ ಸುತ್ತಿನಲ್ಲೇ ನಿರ್ಗಮಿಸಿದ್ದ ಪಿ.ವಿ. ಸಿಂಧು ಭಾರತೀಯ ಸವಾಲನ್ನು ಮುನ್ನಡೆಸಲಿದ್ದಾರೆ.
