ತಾರಾ ದಂಪತಿಗಳ ವಿವಾಹಕ್ಕೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಆರತಕ್ಷತೆಯು ಹೈದರಾಬಾದಿನ ನೊವೆಟೆಲ್ ಹೋಟೆಲ್’ನಲ್ಲಿ ಸಂಜೆ 6.30ರಿಂದ ಆರಂಭವಾಗಲಿದೆ.
ಹೈದರಾಬಾದ್(ನ.30): ಭಾರತದ ತಾರಾ ಶಟ್ಲರ್‌ಗಳಾದ ಸೈನಾ ನೆಹ್ವಾಲ್ ಹಾಗೂ ಪಾರುಪಳ್ಳಿ ಕಶ್ಯಪ್ ವಿವಾಹ ಆರತಕ್ಷತೆ ಡಿ.16ರಂದು ಇಲ್ಲಿನ ಪಂಚತಾರಾ ಹೋಟೆಲ್‌ನಲ್ಲಿ ನಡೆಯಲಿದೆ.
ಇವರಿಬ್ಬರ ಆರತಕ್ಷತೆಯ ಆಮಂತ್ರಣ ಪತ್ರಿಕೆ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದ್ದು, ತಾರಾ ದಂಪತಿಗಳ ವಿವಾಹಕ್ಕೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಆರತಕ್ಷತೆಯು ಹೈದರಾಬಾದಿನ ನೊವೆಟೆಲ್ ಹೋಟೆಲ್’ನಲ್ಲಿ ಸಂಜೆ 6.30ರಿಂದ ಆರಂಭವಾಗಲಿದೆ.
ಸೈನಾ ಹಾಗೂ ಕಶ್ಯಪ್ ಕಳೆದ ಹಲವು ವರ್ಷಗಳಿಂದ ಜತೆಗಿದ್ದು, ಇತ್ತೀಚೆಗಷ್ಟೇ ಇಬ್ಬರ ವಿವಾಹ ಸುದ್ದಿ ಹೊರಬಿದ್ದಿತ್ತು.
