ಸಾಹಾ ಪ್ರಥಮ ದರ್ಜೆ ಕ್ರಿಕೆಟ್'ನಲ್ಲಿ ಚೊಚ್ಚಲ ದ್ವಿಶತಕ ಸಿಡಿಸಿ ಸಂಭ್ರಮಿಸಿದರೆ, ನಾಯಕ ಪೂಜಾರ 37ನೇ ಶತಕ ಬಾರಿಸುವಲ್ಲಿ ಯಶಸ್ವಿಯಾದರು.
ಮುಂಬೈ(ಜ.24): ವೃದ್ದಿಮಾನ್ ಸಾಹಾ ಚೊಚ್ಚಲ ದ್ವಿಶತಕ ಹಾಗೂ ನಾಯಕ ಚೇತೇಶ್ವರ ಪೂಜಾರ ಸಿಡಿಸಿದ ಶತಕದ ನೆರವಿನಿಂದ ಇರಾನಿ ಟ್ರೋಫಿಯಲ್ಲಿ ಶೇಷ ಭಾರತ ತಂಡದ 6 ವಿಕೆಟ್'ಗಳ ಜಯಭೇರಿ ಬಾರಿಸಿದೆ. ಐದನೇ ವಿಕೆಟ್'ಗೆ ಮುರಿಯದ 315ರನ್'ಗಳ ಜತೆಯಾಟದ ಮೂಲಕ ಈ ಜೋಡಿ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾಯಿತು.
ಇಲ್ಲಿನ ಬಾರ್ಬೋನ್ ಕ್ರೀಡಾಂಗಣದಲ್ಲಿ ಐದನೇ ದಿನವಾದ ಇಂದು 113 ರನ್'ಗಳ ಅಲ್ಪ ಗುರಿಯನ್ನು ಬೆನ್ನತ್ತಿದ ಶೇಷ ಭಾರತ ಕೊನೆಯ ದಿನ ಯಾವುದೇ ವಿಕೆಟ್ ಕಳೆದುಕೊಳ್ಳದೇ ಗೆಲುವಿನ ನಗೆ ಬೀರಿದೆ. ಸಾಹಾ ಪ್ರಥಮ ದರ್ಜೆ ಕ್ರಿಕೆಟ್'ನಲ್ಲಿ ಚೊಚ್ಚಲ ದ್ವಿಶತಕ ಸಿಡಿಸಿ ಸಂಭ್ರಮಿಸಿದರೆ, ನಾಯಕ ಪೂಜಾರ 37ನೇ ಶತಕ ಬಾರಿಸುವಲ್ಲಿ ಯಶಸ್ವಿಯಾದರು.
379 ರನ್'ಗಳ ಬೃಹತ್ ಗುರಿ ಬೆನ್ನುಹತ್ತಿದ್ದ ಶೇಷ ಭಾರತಕ್ಕೆ ಆರಂಭದಲ್ಲಿ ಗುಜರಾತ್ ಬೌಲರ್'ಗಳು ಮಾರಕವಾಗಿ ಪರಿಣಮಿಸಿಬಿಟ್ಟಿದ್ದರು. ಒಂದು ಹಂತದಲ್ಲಿ 63 ರನ್'ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡು ಸೋಲಿನತ್ತ ಮುಖ ಮಾಡಿದ್ದ ತಂಡಕ್ಕೆ ವಿಕೆಟ್ ಕೀಪರ್ ಸಾಹಾ ಹಾಗೂ ಪೂಜಾರ ಐದನೇ ವಿಕೆಟ್'ಗೆ ಮುರಿಯದ ಜತೆಯಾಟವಾಡುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು.
ಸಂಕ್ಷಿಪ್ತ ಸ್ಕೋರ್:
ಗುಜರಾತ್ ಮೊದಲ ಇನಿಂಗ್ಸ್: 358
ಶೇಷ ಭಾರತ ಮೊದಲ ಇನಿಂಗ್ಸ್; 226
ಗುಜರಾತ್ ಎರಡನೇ ಇನಿಂಗ್ಸ್: 266/6
ಶೇಷ ಭಾರತ ಎರಡನೇ ಇನಿಂಗ್ಸ್; 379/4
(ವೃದ್ದಿಮಾನ್ ಸಾಹಾ 203*, ಚೇತೇಶ್ವರ ಪೂಜಾರ 116*)
ಪಂದ್ಯ ಪುರುಷೋತ್ತಮ: ವೃದ್ದಿಮಾನ್ ಸಾಹಾ
