ಜಹೀರ್ ಬಿಳಿ ಕುರ್ತಾ ಹಾಗೂ ಫೈಜಾಮದಲ್ಲಿ ಮಿಂಚುತ್ತಿದ್ದರೆ, ಸಾಗಾರಿಕಾ ರೇಷ್ಮೆ ಸೀರೆಯಲ್ಲಿ ಕಂಗೊಳಿಸುತ್ತಿದ್ದರು. ತಾರಾ ಜೋಡಿಯನ್ನು ನೋಡಲು ಅಭಿಮಾನಿಗಳ ಬಳಗವೇ ದೇವಸ್ಥಾನದಲ್ಲಿ ನೆರೆದಿತ್ತು.

ಕೊಲ್ಹಾಪುರ(ಡಿ.03): ನವೆಂಬರ್ 23ರಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಮಾಜಿ ಕ್ರಿಕೆಟಿಗ ಜಹೀರ್ ಖಾನ್ ಹಾಗೂ ಅವರ ಪತ್ನಿ, ನಟಿ ಸಾಗರಿಕಾ ಘಾಟ್ಗೆ ಮಹಾರಾಷ್ಟ್ರದ ಪ್ರಸಿದ್ಧ ಯಾತ್ರಾಸ್ಥಳಗಳಲ್ಲಿ ಒಂದಾದ ಕೊಲ್ಹಾಪುರದ ಮಹಾಲಕ್ಷ್ಮೀ ದೇವಾಲಯಕ್ಕೆ ಭೇಟಿ ನೀಡಿ, ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.

ಆದರೆ ಜಹೀರ್ ಆಗಲಿ ಇಲ್ಲವೇ ಸಾಗರಿಕವಾಗಲಿ ಈ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿಲ್ಲ. ಆದರೆ ಅವರ ಅಭಿಮಾನಿಗಳು ಈ ವಿಚಾರವನ್ನು ಹಂಚಿಕೊಂಡಿದ್ದಾರೆ.

ವಿಶೇಷವೆಂದರೆ ಕೊಲ್ಹಾಪುರ, ಸಾಗರಿಕಾರ ಜನ್ಮಸ್ಥಳ. ಜಹೀರ್ ಬಿಳಿ ಕುರ್ತಾ ಹಾಗೂ ಫೈಜಾಮದಲ್ಲಿ ಮಿಂಚುತ್ತಿದ್ದರೆ, ಸಾಗಾರಿಕಾ ರೇಷ್ಮೆ ಸೀರೆಯಲ್ಲಿ ಕಂಗೊಳಿಸುತ್ತಿದ್ದರು. ತಾರಾ ಜೋಡಿಯನ್ನು ನೋಡಲು ಅಭಿಮಾನಿಗಳ ಬಳಗವೇ ದೇವಸ್ಥಾನದಲ್ಲಿ ನೆರೆದಿತ್ತು.

#ZaheerKhan And #SagarikaGhatge At #Ambabai Temple, #Kolhapur.....

Ad3

A post shared by Filmy Guftagoo (@filmyguftagoo) on