Asianet Suvarna News Asianet Suvarna News

ಗಡ್ಕರಿಗೆ ಪತ್ರ ಬರೆದ ಸಚಿನ್ ತೆಂಡುಲ್ಕರ್ ಮನವಿ ಮಾಡಿಕೊಂಡಿದ್ದೇನು..?

ದ್ವಿಚಕ್ರ ವಾಹನ ಸವಾರರ ಬಗ್ಗೆ ಕಳಕಳಿ ವ್ಯಕ್ತಪಡಿಸಿರುವ ಸಚಿನ್, ಕಳಪೆ ಗುಣಮಟ್ಟದ ಹೆಲ್ಮೆಟ್ ತಯಾರಿಸುವ ಕಂಪನಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಸಾರಿಗೆ ಸಚಿವ ನಿತಿನ್ ಗಡ್ಕರಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ, ಅತಿಹೆಚ್ಚು ಪ್ರಮಾಣದಲ್ಲಿ ರಸ್ತೆ ಅಪಘಾತಕ್ಕೆ ತುತ್ತಾಗುತ್ತಿರುವುದು ದ್ವಿಚಕ್ರ ವಾಹನ ಸವಾರರು. ಹೀಗಾಗಿ ಹೆಲ್ಮೆಟ್ ಗುಣಮಟ್ಟ ಉತ್ತಮವಾಗಿರಬೇಕು ಎಂದು ಸಚಿನ್ ಉಲ್ಲೇಖಿಸಿದ್ದಾರೆ.

Sachin Tendulkar urges Transport Minister Nitin Gadkari to take action after fake helmet manufacturers

ನವದೆಹಲಿ(ಮಾ.20): ರಸ್ತೆ ಸುರಕ್ಷತೆ ಬಗ್ಗೆ ಪದೇ ಪದೆ ಜಾಗೃತಿ ಮೂಡಿಸುತ್ತಾ ಸುದ್ದಿಯಲ್ಲಿರುವ ಕ್ರಿಕೆಟ್ ದಂತಕಥೆ ಹಾಗೂ ರಾಜ್ಯಸಭಾ ಸಂಸದ ಸಚಿನ್ ತೆಂಡುಲ್ಕರ್ ಇದೇ ವಿಚಾರವಾಗಿ ಮತ್ತೆ ಸುದ್ದಿಯಲ್ಲಿದ್ದಾರೆ.

ದ್ವಿಚಕ್ರ ವಾಹನ ಸವಾರರ ಬಗ್ಗೆ ಕಳಕಳಿ ವ್ಯಕ್ತಪಡಿಸಿರುವ ಸಚಿನ್, ಕಳಪೆ ಗುಣಮಟ್ಟದ ಹೆಲ್ಮೆಟ್ ತಯಾರಿಸುವ ಕಂಪನಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಸಾರಿಗೆ ಸಚಿವ ನಿತಿನ್ ಗಡ್ಕರಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ, ಅತಿಹೆಚ್ಚು ಪ್ರಮಾಣದಲ್ಲಿ ರಸ್ತೆ ಅಪಘಾತಕ್ಕೆ ತುತ್ತಾಗುತ್ತಿರುವುದು ದ್ವಿಚಕ್ರ ವಾಹನ ಸವಾರರು. ಹೀಗಾಗಿ ಹೆಲ್ಮೆಟ್ ಗುಣಮಟ್ಟ ಉತ್ತಮವಾಗಿರಬೇಕು ಎಂದು ಸಚಿನ್ ಉಲ್ಲೇಖಿಸಿದ್ದಾರೆ.

'ನಿಮ್ಮ ಇಲಾಖೆ ಕಳಪೆ ಗುಣಮಟ್ಟದ ಹೆಲ್ಮೆಟ್ ತಯಾರಿಕರ ಹಾಗೂ ಸುಳ್ಳು ಐಎಸ್ಐ ಮಾರ್ಕ್ ಹಾಕಿ ಮಾರಾಟ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಒಬ್ಬ ಆಟಗಾರನಾಗಿ ಗುಣಮಟ್ಟದ ಹೆಲ್ಮೆಟ್ ಬಗ್ಗೆ ನನಗೆ ಅರಿವಿದೆ ಎಂದು ತೆಂಡುಲ್ಕರ್ ಪತ್ರದಲ್ಲಿ ತಿಳಿಸಿದ್ದಾರೆ'.

ಭಾರತದಲ್ಲಿ ಸುಮಾರು 70% ರಷ್ಟು ಬೈಕ್ ಸವಾರರು ಕಳಪೆ ಹೆಲ್ಮೆಟ್ ಖರೀದಿಸಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಇದು ದ್ವಿಚಕ್ರ ಸವಾರರು ಎಚ್ಚೆತ್ತುಕೊಳ್ಳುವ ಸಮಯ. 2016ರ ಅಪಘಾತದಲ್ಲಿ ಶೇ.30 ಮಂದಿ ದ್ವಿಚಕ್ರ ವಾಹನ ಸವಾರರು ಅಪಘಾತಕ್ಕೆ ತುತ್ತಾಗಿದ್ದಾರೆ. ಗುಣಮಟ್ಟದ ಹೆಲ್ಮೆಟ್ ಧರಿಸುವುದರಿಂದ ಶೇ.42% ಬೈಕ್ ಸವಾರರು ಅಪಘಾತದಿಂದ ಚೇತರಿಸಿಕೊಳ್ಳಬಹುದು ಎಂದು ಸಚಿನ್ ಹೇಳಿದ್ದಾರೆ.

Follow Us:
Download App:
  • android
  • ios