ಹೌದು ಸೆಹ್ವಾಗ್ ಅವರೊಂದಿಗೆ ದಶಕಗಳ ಕಾಲ ಜೋಡಿಯಾಗಿ ಕ್ರೀಸ್ ಹಂಚಿಕೊಂಡಿದ್ದ ಸಚಿನ್ ತೆಂಡೂಲ್ಕರ್ ಉಲ್ಟಾ ವಿಶ್ ಮಾಡುವ ಮೂಲಕ ಸುದ್ದಿಯಾಗಿದ್ದಾರೆ.
ಹುಟ್ಟುಹಬ್ಬದ ಸಂಭ್ರಮದಲ್ಲಿರುವ ವಿರೇಂದ್ರ ಸೆಹ್ವಾಗ್'ಗೆ ಕ್ರಿಕೆಟ್ ದಂತಕತೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ವಿನೂತನವಾಗಿ ಹುಟ್ಟುಹಬ್ಬದ ಶುಭ ಕೋರವ ಮೂಲಕ ಸಾಕಷ್ಟು ಗಮನ ಸೆಳೆಯುತ್ತಿದ್ದಾರೆ.
ಹೌದು ಸೆಹ್ವಾಗ್ ಅವರೊಂದಿಗೆ ದಶಕಗಳ ಕಾಲ ಜೋಡಿಯಾಗಿ ಕ್ರೀಸ್ ಹಂಚಿಕೊಂಡಿದ್ದ ಸಚಿನ್ ತೆಂಡೂಲ್ಕರ್ ಉಲ್ಟಾ ವಿಶ್ ಮಾಡುವ ಮೂಲಕ ಸುದ್ದಿಯಾಗಿದ್ದಾರೆ.
'ಹ್ಯಾಪಿ ಬರ್ತ್ ಡೇ ವೀರೂ! ಹ್ಯಾವ್ ಎ ಗ್ರೇಟ್ ಸ್ಟಾರ್ಟ್ ಟು ದ ನ್ಯೂ ಇಯರ್. ಯು ಹ್ಯಾವ್ ಆಲ್ವೇಸ್ ಡನ್ ಉಲ್ಟಾ ಆಫ್ ವಾಟ್ ಐ ಹ್ಯಾವ್ ಟೋಲ್ಡ್ ಯು ಆನ್ ಫೀಲ್ಡ್. ಸೋ ಹಿಯರ್ಸ್ ಒನ್ ಪ್ರಮ್ ಮೀ?' ಎಂದು ಟ್ವೀಟ್ ಮಾಡಿದ್ದಾರೆ.
ಇದಲ್ಲದೇ ಯುವರಾಜ್ ಸಿಂಗ್, ರೋಹಿತ್ ಶರ್ಮಾ, ಅನಿಲ್ ಕುಂಬ್ಳೆ ಮುಂತಾದ ದಿಗ್ಗಜ ಕ್ರಿಕೆಟಿಗರು ವೀರೂಗೆ ಹುಟ್ಟುಹಬ್ಬದ ಶುಭ ಕೋರಿದ್ದಾರೆ.