ಸಚಿನ್ ಮಾಡಿರುವ ಅಡುಗೆ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ
ಮುಂಬೈ(ಜ.03): ಕ್ರಿಕೆಟ್ ಲೋಕದ ದಂತಕತೆ ಸಚಿನ್ ತೆಂಡುಲ್ಕರ್, ಬ್ಯಾಟ್ ಬದಲು ಕೈಯಲ್ಲಿ ಸೌಟ್ ಹಿಡಿದಿದ್ದಾರೆ. ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಸಚಿನ್, ತಮ್ಮ ಕುಟುಂಬ ಹಾಗೂ ಸ್ನೇಹಿತರಿಗಾಗಿ ಅಡುಗೆ ಸಿದ್ಧಪಡಿಸಿದ್ದಾರೆ.
ಈ ವಿಡಿಯೋವನ್ನು ಟ್ವೀಟ್'ಮಾಡಿರುವ ಸಚಿನ್, ‘ಹೊಸ ವರ್ಷದ ಸಂಜೆ ವೇಳೆ ನನ್ನ ಸ್ನೇಹಿತರಿಗಾಗಿ ಅಡುಗೆ ಸಿದ್ಧ ಪಡಿಸುತ್ತಿರುವುದು ಸಂತಸವನ್ನುಂಟು ಮಾಡಿದೆ. ನೀವು ಸಹ ಇದೇ ರೀತಿ ಆಪ್ತರೊಂದಿಗೆ ಹೊಸ ವರ್ಷದ ಕ್ಷಣಗಳನ್ನು ಸಂತಸ ವಾಗಿ ಕಳೆದಿದ್ದೀರಾ ಎಂದು ಭಾವಿಸಿದ್ದೇನೆ. ಹೊಸ ವರ್ಷದ ಶುಭಾಶಯಗಳು’ ಎಂದು ಬರೆದಿದ್ದಾರೆ.
ಸಚಿನ್ ಮಾಡಿರುವ ಅಡುಗೆ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ
