ಮುಂಬೈ(ಜು.16): ಗುರುಪೂರ್ಣಿಮೆ ದಿನವನ್ನು ಭಾರತದಲ್ಲಿ ಭಕ್ತಿ ಹಾಗೂ ಗೌರವದಿಂದ ಆಚರಿಸಲಾಗಿದೆ.  ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್‌ಗೆ ಕ್ರಿಕೆಟ್ ಪಾಠ ಕಲಿಸಿದ ಬಾಲ್ಯದ ಗುರು ರಮಾಕಾಂತ್ ಅಚ್ರೇಕರ್‌ಗೆ ಗುರು ಪೂರ್ಣಿಮಾ ದಿನ ಗೌರವ ಸಲ್ಲಿಸಿದ್ದಾರೆ. ದಿಗ್ಗಜ ಕ್ರಿಕೆಟಿಗ ಸಚಿನ್, ಟ್ವಿಟರ್ ಮೂಲಕ ಅಚ್ರೇಕರ್ ನೆನಪಿಸಿಕೊಂಡಿದ್ದಾರೆ.

ಇದನ್ನೂ ಓದಿ: 119 ವರ್ಷದ ಹಳೆ ಕಾರು ಓಡಿಸಿದ ಸಚಿನ್‌ ತೆಂಡುಲ್ಕರ್‌

ವಿದ್ಯಾರ್ಥಿಗಳನ್ನು ಕತ್ತಲೆಯಿಂದ ಬೆಳಕಿನಡೆಗೆ ಕರೆತರುವವನೇ ಗುರು. ನನ್ನ ಗುರುವಾಗಿ, ನನ್ನ ತಪ್ಪುಗಳನ್ನು ತಿದ್ದಿ ಮಾರ್ಗದರ್ಶನ ಮಾಡಿ ನನ್ನನ್ನು ಈ ಮಟ್ಟಕ್ಕೆ ಬೆಳೆಸಿದ ಗುರು ಆಚ್ರೇಕರ್‌ಗೆ ನಾನು ಚಿರಋಣಿ ಎಂದು ಸಚಿನ್ ಟ್ವೀಟ್ ಮಾಡಿದ್ದಾರೆ.

 

ಇದನ್ನೂ ಓದಿ: ಧೋನಿಗೆ ಸಚಿನ್ ಕ್ಲಾಸ್: ಕಿತ್ತಾಡಿಕೊಂಡ ಅಭಿಮಾನಿಗಳು

ಸಚಿನ್ ತೆಂಡುಲ್ಕರ್, ವಿನೋದ್ ಕಾಂಬ್ಲಿಗೆ ಕ್ರಿಕೆಟ್ ಗುರುವಾಗಿದ್ದ ಅಜ್ರೇಕರ್ ಮುಂಬೈನ ದಾದರ್ ಸಮೀಪದ ಶಿವಾಜಿ ಪಾರ್ಕ್‌ನಲ್ಲಿ ಕ್ರಿಕೆಟ್ ಪಾಠ ಕಲಿಸಿದ್ದರು. ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ಸಚಿನ್ ಗುರು ರಮಾಕಾಂತ್ ಅಚ್ರೇಕರ್(87),  2019ರ ಜನವರಿಯಲ್ಲಿ ನಿಧನರಾದರು.