ಕೊಹ್ಲಿ ಸಚಿನ್ ಹಾದಿಯಲ್ಲಿಯೇ ಸಾಗುತ್ತಿದ್ದಾರೆ ಎನ್ನುವುದಕ್ಕೆ ಈ ಅಂಕಿ-ಅಂಶಗಳು ಪುಷ್ಠಿ ನೀಡುತ್ತಿವೆ.  

ನವದೆಹಲಿ(ಫೆ.11): ಸತತ ನಾಲ್ಕು ಸರಣಿಗಳಲ್ಲಿ ನಾಲ್ಕು ದ್ವಿಶತಕ ಬಾರಿಸಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ಸಾಧನೆಯನ್ನು ಇಡೀ ಕ್ರಿಕೆಟ್ ಜಗತ್ತೇ ಕೊಂಡಾಡುತ್ತಿದೆ. ಇದಕ್ಕೆ ಹೊಸ ಸೇರ್ಪಡೆಯೆಂಬಂತೆ ಕ್ರಿಕೆಟ್ ದೇವರು ಕೂಡ ಕೊಹ್ಲಿ ಸಾಧನೆಯ ಗುಣಗಾನ ಮಾಡಿದ್ದಾರೆ.

ಕೊಹ್ಲಿ ಫಾರ್ಮ್ ಬಗ್ಗೆ ಮಾಸ್ಟರ್ ಬ್ಲಾಸ್ಟರ್ ಹೇಳಿದ್ದಿಷ್ಟು..

Scroll to load tweet…

ಸದ್ಯ 54ನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ವಿರಾಟ್ ಕೊಹ್ಲಿ, 4413 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 16 ಶತಕಗಳು ಹಾಗೂ 14 ಅರ್ಧಶತಕಗಳನ್ನೂ ತಮ್ಮ ಬುಟ್ಟಿಗೆ ಹಾಕಿಕೊಂಡಿದ್ದಾರೆ. ಇನ್ನು ಸಚಿನ್ ತೆಂಡೂಲ್ಕರ್ 50 ಪಂದ್ಯಗಳಲ್ಲಿ 49.82ರ ಸರಾಸರಿಯಲ್ಲಿ 3435ರನ್ ಬಾರಿಸಿದ್ದರು. ಇದರಲ್ಲಿ 11 ಶತಕ ಹಾಗೂ 16 ಅರ್ಧಶತಕಗಳು ಸೇರಿದ್ದವು. ಕೊಹ್ಲಿ ಸಚಿನ್ ಹಾದಿಯಲ್ಲಿಯೇ ಸಾಗುತ್ತಿದ್ದಾರೆ ಎನ್ನುವುದಕ್ಕೆ ಈ ಅಂಕಿ-ಅಂಶಗಳು ಪುಷ್ಠಿ ನೀಡುತ್ತಿವೆ.