ಆಸ್ಟ್ರೇಲಿಯಾ ತಂಡವು ಅಡಿಲೇಡ್'ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು 285ರನ್'ಗಳಿಂದ ಗೆದ್ದುಕೊಂಡರೆ, ಮೆಲ್ಬೋರ್ನ್'ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯವನ್ನು ಆಸೀಸ್ ಪಡೆ 180ರನ್ ಗಳಿಂದ ಕೈವಶ ಮಾಡಿಕೊಂಡಿದ್ದು, ಸಿಡ್ನಿಯಲ್ಲಿ ನಡೆದ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಇನಿಂಗ್ಸ್ ಹಾಗೂ 141ರನ್'ಗಳಿಂದ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಂಡಿತ್ತು.

ಮುಂಬೈ(ಮೇ.17): ತಮ್ಮ 24 ವರ್ಷಗಳ ಅಂತಾ­ರಾಷ್ಟ್ರೀಯ ಕ್ರಿಕೆಟ್‌ ವೃತ್ತಿ ಬದುಕಿನಲ್ಲಿ 1999ರ ಆಸ್ಪ್ರೇಲಿಯಾ ಸರಣಿ ಅತ್ಯಂತ ಕಠಿಣವಾಗಿತ್ತು ಎಂದು ಸಚಿನ್‌ ತೆಂಡೂಲ್ಕರ್‌ ಹೇಳಿದ್ದಾರೆ.

Add Asianetnews Kannada as a Preferred SourcegooglePreferred

‘‘ಖಂಡಿತವಾಗಿಯೂ 99ರ ಆಸ್ಪ್ರೇಲಿಯಾ ಪ್ರವಾಸ ನನ್ನ ವೃತ್ತಿಬದುಕಿನ ಅತ್ಯಂತ ಕಠಿಣ ಸರಣಿ. ಆಸೀಸ್‌ ತಂಡದಲ್ಲಿದ್ದ 11 ಆಟಗಾರರ ಪೈಕಿ 7ರಿಂದ 8 ಆಟಗಾರರು ಏಕಾಂಗಿಯಾಗಿ ಪಂದ್ಯ ಗೆಲ್ಲಿಸುವವರಾಗಿದ್ದರು. ಉಳಿದ ಆಟಗಾರರು ಸಹ ಪ್ರಬಲ ಪೈಪೋಟಿ ನೀಡುತ್ತಿದ್ದರು. ಆ ಸರಣಿಯಲ್ಲಿ ನಾವು 0-3 ಅಂತರದಲ್ಲಿ ಸೋಲುಂಡಿದ್ದೆವು'' ಎಂದು ಸಚಿನ್‌ ಹೇಳಿದ್ದಾರೆ.

ಆ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡವು ಅಡಿಲೇಡ್'ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು 285ರನ್'ಗಳಿಂದ ಗೆದ್ದುಕೊಂಡರೆ, ಮೆಲ್ಬೋರ್ನ್'ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯವನ್ನು ಆಸೀಸ್ ಪಡೆ 180ರನ್ ಗಳಿಂದ ಕೈವಶ ಮಾಡಿಕೊಂಡಿದ್ದು, ಸಿಡ್ನಿಯಲ್ಲಿ ನಡೆದ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಇನಿಂಗ್ಸ್ ಹಾಗೂ 141ರನ್'ಗಳಿಂದ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಂಡಿತ್ತು.

ಆಸ್ಪ್ರೇಲಿಯಾ ತಂಡದ ಆಕ್ರಮಣಕಾರಿ ಆಟವನ್ನು ನೆನೆಪಿಸಿಕೊಂಡ ಸಚಿನ್‌, ಆ ರೀತಿ ಆಟವನ್ನು ಪ್ರತಿ ತಂಡವೂ ಆಡಲು ಬಯಸುತ್ತದೆ ಎಂದಿದ್ದಾರೆ.