ಇಲ್ಲಿಯವರೆಗೂ ಪ್ರೋ ಕಬಡ್ಡಿ ಲೀಗ್ ಟೂರ್ನಿಯು ಡೆಲ್ಲಿ, ಮುಂಬೈ, ಬೆಂಗಳೂರು, ಕೋಲ್ಕತ, ಹೈದರಾಬಾದ್, ಪಾಟ್ನಾ, ಪುಣೆ ಹಾಗೂ ಜೈಪುರದಲ್ಲಿ ಜರುಗುತ್ತು.

ಮುಂಬೈ(ಮೇ.12): ಪ್ರೋ ಕಬಡ್ಡಿ ಲೀಗ್‌'ನ 5ನೇ ಆವೃತ್ತಿಗೆ ಹೊಸದಾಗಿ 4 ತಂಡಗಳನ್ನು ಸೇರ್ಪಡೆಗೊಳಿಸಲಾಗಿದ್ದು, ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಚೆನ್ನೈ ತಂಡದ ಸಹ ಮಾಲೀಕತ್ವ ಪಡೆದುಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇನ್ನುಳಿದಂತೆ ಗುಜರಾತ್, ಉತ್ತರ ಪ್ರದೇಶ ಹಾಗೂ ಹರ್ಯಾಣ ತಂಡಗಳು ಈ ಬಾರಿ ಪ್ರೋ ಕಬಡ್ಡಿ ಟೂರ್ನಿಯಲ್ಲಿ ಪಾರ್ದಾಪಣೆ ಮಾಡುತ್ತಿವೆ. ಅದಾನಿ ಸಂಸ್ಥೆ ಗುಜರಾತ್ ತಂಡ ಖರೀದಿಸಿದರೆ, ಜೆಎಸ್‌'ಡಬ್ಲ್ಯೂ ಸಂಸ್ಥೆ ಹರ್ಯಾಣ ತಂಡವನ್ನು ಖರೀದಿಸಿದೆ. ಜಿಎಂಆರ್ ಸಂಸ್ಥೆ ಉತ್ತರ ಪ್ರದೇಶ ತಂಡದ ಮಾಲೀಕತ್ವ ಪಡೆದುಕೊಂಡಿದೆ. ಇದರೊಂದಿಗೆ ಈ ಆವೃತ್ತಿಯಲ್ಲಿ ಒಟ್ಟು ತಂಡಗಳ ಸಂಖ್ಯೆ 12ಕ್ಕೇರಿದೆ.

ಇಂಡಿಯನ್ ಸೂಪರ್ ಲೀಗ್‌'ನಲ್ಲಿ ಕೊಚ್ಚಿ ತಂಡವನ್ನು ಖರೀದಿಸಿದ್ದ ಸಚಿನ್, ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್‌'ನಲ್ಲಿ ಬೆಂಗಳೂರು ತಂಡದ ಮಾಲೀಕತ್ವ ಪಡೆದುಕೊಂಡಿದ್ದರು. ಇದೀಗ ಕಬಡ್ಡಿ ತಂಡವನ್ನೂ ಖರೀದಿಸಿದ್ದಾರೆ.

ಇಲ್ಲಿಯವರೆಗೂ ಪ್ರೋ ಕಬಡ್ಡಿ ಲೀಗ್ ಟೂರ್ನಿಯು ಡೆಲ್ಲಿ, ಮುಂಬೈ, ಬೆಂಗಳೂರು, ಕೋಲ್ಕತ, ಹೈದರಾಬಾದ್, ಪಾಟ್ನಾ, ಪುಣೆ ಹಾಗೂ ಜೈಪುರದಲ್ಲಿ ಜರುಗುತ್ತು.