ಭಾರತ ವನಿತೆಯರ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ಫೆಬ್ರವರಿ 5ರಿಂದ ಕಿಂಬರ್ಲಿಯಲ್ಲಿ ಆರಂಭವಾಗಲಿರುವ 3 ಪಂದ್ಯಗಳ ಏಕದಿನ ಸರಣಿ ಹಾಗೂ ಫೆಬ್ರವರಿ 13ರಿಂದ ಆರಂಭವಾಗಲಿರುವ 5 ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ

ಮುಂಬೈ(ಜ.23): ಮುಂದಿನ ತಿಂಗಳು ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿರುವ ಭಾರತ ಮಹಿಳಾ ತಂಡವನ್ನು ಸಚಿನ್ ತೆಂಡುಲ್ಕರ್ ತಮ್ಮ ಸ್ಫೂರ್ತಿದಾಯಕ ಮಾತುಗಳಿಂದ ಹುರಿದುಂಬಿಸಿದ್ದಾರೆ.

ಏಕದಿನ ಹಾಗೂ ಟಿ20 ಸರಣಿಗಳ ಕಠಿಣ ಸವಾಲನ್ನು ಎದುರಿಸಲು ಮುಂಬೈ ಕ್ರಿಕೆಟ್ ಸಂಸ್ಥೆಯ ಬಾಂದ್ರಾ ಕುರ್ಲಾ ಸಂಕೀರ್ಣದಲ್ಲಿ ಅಭ್ಯಾಸ ನಡೆಸುತ್ತಿರುವ ಮಿಥಾಲಿ ರಾಜ್ ನೇತೃತ್ವದ ತಂಡವನ್ನು ಸಚಿನ್ ಭೇಟಿ ಮಾಡಿದರು. ಧನಾತ್ಮಕ ಮನಸ್ಥಿತಿಯೊಂದಿಗೆ ಪ್ರವಾಸಕ್ಕೆ ತೆರಳುವಂತೆ ಸಚಿನ್, ಆಟಗಾರ್ತಿಯರಿಗೆ ಸಲಹೆ ನೀಡಿದರು. ಆಟಗಾರ್ತಿಯರ ಎಲ್ಲಾ ಪ್ರಶ್ನೆಗಳಿಗೆ ಸಚಿನ್ ತಾಳ್ಮೆಯಿಂದ ಉತ್ತರಿಸಿದರು ಎಂದು ಮೂಲಗಳು ತಿಳಿಸಿವೆ.

ಮಿಥಾಲಿ ಪಡೆ ಭೇಟಿ ಮಾಡಿದ್ದು ಸಂತೋಷವನ್ನುಂಟು ಮಾಡಿತು ಎಂದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

Scroll to load tweet…

ಭಾರತ ವನಿತೆಯರ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ಫೆಬ್ರವರಿ 5ರಿಂದ ಕಿಂಬರ್ಲಿಯಲ್ಲಿ ಆರಂಭವಾಗಲಿರುವ 3 ಪಂದ್ಯಗಳ ಏಕದಿನ ಸರಣಿ ಹಾಗೂ ಫೆಬ್ರವರಿ 13ರಿಂದ ಆರಂಭವಾಗಲಿರುವ 5 ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ