ಮಾಹಿ ಈಗಲೂ ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢರಾಗಿದ್ದಾರೆ. ಹಾಗಾಗಿ ತಾವು ಯಾವಾಗ ನಿವೃತ್ತಿ ತೆಗೆದುಕೊಳ್ಳಬೇಕು ಎನ್ನುವ ತೀರ್ಮಾನವನ್ನು ಅವರೇ ತೆಗೆದುಕೊಳ್ಳಲಿದ್ದಾರೆ ಎಂದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಗೆದುಕೊಳ್ಳಲಿದ್ದಾರೆ.
ಮುಂಬೈ(ಡಿ.06): ಸೀಮಿತ ಓವರ್'ಗಳ ಟೀಂ ಇಂಡಿಯಾ ನಾಯಕ ಎಂ.ಎಸ್. ಧೋನಿ ನಿವೃತ್ತಿಗೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಭಾರತದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಈ ಕುರಿತು ಅವರೇ ಅಂತಿಮ ನಿರ್ಧಾರ ತಳೆಯಲಿದ್ದಾರೆ ಎಂದಿದ್ದಾರೆ.
‘‘ವಯಸ್ಸಿಗೂ, ಆಟಗಾರ ತೋರುತ್ತಿರುವ ಪ್ರದರ್ಶನಕ್ಕೂ ಒಂದನ್ನೊಂದು ತಳಕು ಹಾಕುವುದು ಸರಿಯಲ್ಲ. ಟಿ20 ಪಂದ್ಯಾವಳಿಯು ಕೇವಲ ಯುವಕರಿಗಷ್ಟೇ ಎಂದು ಹೇಳಲಾಗಿತ್ತು. ಆದರಿದನ್ನು ನಾನು ಒಪ್ಪುವುದಿಲ್ಲ. ಬ್ರಾಡ್ ಹಾಗ್ 44ರ ಹರೆಯದಲ್ಲೂ ಟಿ20 ಆಡುತ್ತಾರೆ. ಅಂತೆಯೇ 38ರ ಹರೆಯದಲ್ಲಿ ನಾನು ಏಕದಿನ ಕ್ರಿಕೆಟ್'ನಲ್ಲಿ ದ್ವಿಶತಕ ಬಾರಿಸಿದೆ. ಆಟಗಾರನೊಬ್ಬ ಮಾನಸಿಕ ಹಾಗೂ ದೈಹಿಕವಾಗಿ ಸ್ಥಿರವಾಗಿರುವುದಷ್ಟೇ ಕ್ರೀಡೆಯಲ್ಲಿ ಮುಖ್ಯ’’ ಎಂದು ಸಚಿನ್ ದ ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಮಾಹಿ ಈಗಲೂ ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢರಾಗಿದ್ದಾರೆ. ಹಾಗಾಗಿ ತಾವು ಯಾವಾಗ ನಿವೃತ್ತಿ ತೆಗೆದುಕೊಳ್ಳಬೇಕು ಎನ್ನುವ ತೀರ್ಮಾನವನ್ನು ಅವರೇ ತೆಗೆದುಕೊಳ್ಳಲಿದ್ದಾರೆ ಎಂದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಗೆದುಕೊಳ್ಳಲಿದ್ದಾರೆ.