ಸಂಪೂರ್ಣ ಸಂಬಳ , ಭತ್ಯೆಯನ್ನು ಪ್ರಧಾನಿ ಪರಿಹಾರ ನಿಧಿಗೆ ನೀಡಿದ ಸಚಿನ್

First Published 1, Apr 2018, 2:02 PM IST
Sachin Tendulkar Donates Entire salary and Allowance to PM Relief Fund
Highlights

ರಾಜ್ಯಸಭಾ ಎಂಪಿಯಾಗಿದ್ದ ಕ್ರಿಕೆಟ್ ತಾರೆ ಸಚಿನ್ ತೆಂಡೂಲ್ಕರ್ ಅವರ  ಮೇಲೆ ಇದ್ದ ಆರೋಪವೆಂದರೆ ಅವರು ಅತ್ಯಂತ ಕಡಿಮೆ ದಿನ ರಾಜ್ಯಸಭೆಗೆ ಹಾಜರಾಗಿದ್ದಾರೆ ಎನ್ನುವುದಾಗಿದೆ.

ಮುಂಬೈ : ರಾಜ್ಯಸಭಾ ಎಂಪಿಯಾಗಿದ್ದ ಕ್ರಿಕೆಟ್ ತಾರೆ ಸಚಿನ್ ತೆಂಡೂಲ್ಕರ್ ಅವರ  ಮೇಲೆ ಇದ್ದ ಆರೋಪವೆಂದರೆ ಅವರು ಅತ್ಯಂತ ಕಡಿಮೆ ದಿನ ರಾಜ್ಯಸಭೆಗೆ ಹಾಜರಾಗಿದ್ದಾರೆ ಎನ್ನುವುದಾಗಿದೆ.

ಇದೀಗ ಸಚಿನ್ ತೆಂಡುಲ್ಕರ್ ಅವರು ಸಂಸದರಾಗಿದ್ದಕ್ಕೆ ದೊರೆತ ಸಂಪೂರ್ಣ ವೇತನ ಹಾಗೂ ಭತ್ಯೆಯನ್ನೂ ಕೂಡ ಪ್ರಧಾನಿ ಪರಿಹಾರ ನಿಧಿಗೆ ದಾನವಾಗಿ ನೀಡಿದ್ದಾರೆ.

ಕಳೆದ 6 ವರ್ಷಗಳಲ್ಲಿ ತೆಂಡೂಲ್ಕರ್ ಅವರಿಗೆ ಸಂಬಳ ಹಾಗೂ ತಿಂಗಳ ಭತ್ಯೆ ಎಲ್ಲವೂ ಸೇರಿ 90 ಲಕ್ಷ ದೊರಕಿದ್ದು, ಸಂಪೂರ್ಣ ಹಣವನ್ನೂ ಕೂಡ ಪ್ರಧಾನಿ ಪರಿಹಾರ ನಿಧಿಗೆ ನೀಡಿದ್ದಾರೆ.

ಈ ವರ್ಷ ಸಂಸತ್’ಗೆ ಅತ್ಯಂತ ಕಡಿಮೆ ಹಾಜರಾತಿ ಹೊಂದಿದ್ದಾರೆ ಎಂದು ತೆಂಡೂಲ್ಕರ್ ಹಾಗೂ ರೇಖಾ ವಿರುದ್ಧ ರೋಪಗಳು ಕೇಳಿ ಬಂದಿದ್ದವು. ಆದರೆ ಇದೀಗ ಅವರು ಸಂಪೂರ್ಣ ಹಣವನ್ನೂ ಕೂಡ ಪ್ರಧಾನಿ ಪರಿಹಾರ ನಿಧಿಗೆ ನೀಡಿದ್ದಾರೆ.  

loader