ಟೀಂ ಇಂಡಿಯಾದ ಈ ಜೋಡಿಯನ್ನು ಗುಣಗಾನ ಮಾಡಿದ ಮಾಸ್ಟರ್'ಬ್ಲಾಸ್ಟರ್..!

First Published 18, Feb 2018, 4:53 PM IST
Sachin Tendulkar All Praise For Yuzvendra Chahal Kuldeep Yadav
Highlights

6 ಪಂದ್ಯಗಳ ಏಕದಿನ ಸರಣಿಯಲ್ಲಿ ಕುಲ್ದೀಪ್-ಚಾಹಲ್ ಜೋಡಿ 33 ವಿಕೆಟ್ ಪಡೆಯುವ ಮೂಲಕ ಟೀಂ ಇಂಡಿಯಾ ಆಫ್ರಿಕಾ ನೆಲದಲ್ಲಿ ಚೊಚ್ಚಲ ಸರಣಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಈ ಟೂರ್ನಿಯಲ್ಲಿ ಕುಲ್ದೀಪ್ 17 ವಿಕೆಟ್ ಪಡೆದರೆ, ಚಾಹಲ್ 16 ವಿಕೆಟ್ ಪಡೆದಿದ್ದರು.

ಬೆಂಗಳೂರು(ಫೆ.18): ಭಾರತದ ಯುವ ಸ್ಪಿನ್ನರ್‌'ಗಳಾದ ಕುಲ್ದೀಪ್ ಹಾಗೂ ಚಾಹಲ್ ಪ್ರದರ್ಶನದ ಬಗ್ಗೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಯುವ ಸ್ಪಿನ್ ಜೋಡಿ, ಭಾರತ ವಿದೇಶ ಪ್ರವಾಸಗಳಲ್ಲಿ ಯಶಸ್ಸು ಸಾಧಿಸಲು ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಸಚಿನ್ ಅಭಿಪ್ರಾಯಪಟ್ಟಿದ್ದಾರೆ. ‘ಕುಲ್ದೀಪ್, ಚಾಹಲ್ ಸಂಘಟಿತ ಪ್ರದರ್ಶನ ತೋರುತ್ತಿದ್ದಾರೆ. ಇವರ ಬೌಲಿಂಗ್ ಶೈಲಿಯನ್ನು ವಿಶ್ವದ ಶ್ರೇಷ್ಠ ಬ್ಯಾಟ್ಸ್‌'ಮನ್‌'ಗಳಿಗೂ ಅರಿಯಲು ಸಾಧ್ಯವಾಗುತ್ತಿಲ್ಲ. ತಂಡದ ಪಾಲಿಗೆ ಇದು ಉತ್ತಮ ಬೆಳವಣಿಗೆ’ ಎಂದು ಸಚಿನ್ ಹೇಳಿದ್ದಾರೆ.

loader