ಸನ್ ರೈಸರ್ಸ್ ಹೈದರಾಬಾದ್’ನ ಸ್ಟಾರ್ ಪ್ಲೇಯರ್ ರಶೀದ್ ಖಾನ್ ಇದೀಗ ಭಾರೀ ಪ್ರಶಂಸೆಗೆ ಪಾತ್ರರಾಗುತ್ತಿದ್ದಾರೆ. ನಿನ್ನೆ ನಡೆದ ಕೆಕೆಆರ್ ವಿರುದ್ದದ ಪಂದ್ಯದಲ್ಲಿ ಬ್ಯಾಟ್ ಮತ್ತು ಬೌಲಿಂಗ್ ಎರಡೂ ವಿಭಾಗದಲ್ಲಿ ಮಿಂಚಿದ ಈ ಆಫ್ಘನ್ ಆಟಗಾರನಿಗೆ ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಸೇರಿದಂತೆ ಹಲವು ದಿಗ್ಗಜರು ಶುಭಾಷಯ ತಿಳಿಸಿದ್ದಾರೆ.
ಮುಂಬೈ(ಮೇ.26): ಸನ್ ರೈಸರ್ಸ್ ಹೈದರಾಬಾದ್ ನ ಸ್ಟಾರ್ ಪ್ಲೇಯರ್ ರಶೀದ್ ಖಾನ್ ಇದೀಗ ಭಾರೀ ಪ್ರಶಂಸೆಗೆ ಪಾತ್ರರಾಗುತ್ತಿದ್ದಾರೆ. ನಿನ್ನೆ ನಡೆದ ಕೆಕೆಆರ್ ವಿರುದ್ದದ ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗದಲ್ಲಿ ಮಿಂಚಿದ ಈ ಆಫ್ಘನ್ ಆಟಗಾರನಿಗೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಸೇರಿದಂತೆ ಹಲವು ದಿಗ್ಗಜರು ಶುಭಾಶಯ ತಿಳಿಸಿದ್ದಾರೆ.
ನಿನ್ನೆಯ ಪಂದ್ಯದಲ್ಲಿ ರಶೀದ್ ತೋರಿದ ಪ್ರದರ್ಶನ ಮೆಚ್ಚಿರುವ ಸಚಿನ್, ರಶೀದ್ ಖಾನ್ ವಿಶ್ವದ ಶ್ರೇಷ್ಠ ಟಿ-20 ಸ್ಪಿನ್ನರ್ ಎಂದು ಕೊಂಡಾಡಿದ್ದಾರೆ. ಈ ಕುರಿತು ಟ್ವಿಟ್ ಮಾಡಿರುವ ಅವರು, ರಶೀದ್ ಟಿ-20 ಮಾದರಿಯಲ್ಲಿ ವಿಶ್ವದ ಅತ್ಯಂತ ಶ್ರೇಷ್ಠ ಸ್ಪಿನ್ನರ್ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೇ ನಿನ್ನೆ ರಶೀದ್ ತೋರಿದ ಬ್ಯಾಟಿಂಗ್ ಕೌಶಲ್ಯ ಕೂಡ ಸಚಿನ್ ಮೆಚ್ಚುಗೆಗೆ ಪಾತ್ರವಾಗಿದೆ.
ಇನ್ನು ರಶೀದ್ ಅವರಿಗೆ ಇತರ ಕ್ರಿಕೆಟ್ ದಿಗ್ಗಜರಿಂದಲೂ ಪ್ರಶಂಸೆಯ ಮಹಾಪೂರ ಹರಿದು ಬಂದಿದ್ದು, ಅನಿಲ್ ಕುಂಬ್ಳೆ, ಆರ್.ಪಿ. ಸಿಂಗ್, ಸೇರಿದಂತೆ ಹಲವು ಹಿರಿಯ ಆಟಗಾರರು ರಶೀದ್ ಆಟಕ್ಕೆ ತಲೆದೂಗಿದ್ದಾರೆ. ಅಲ್ಲದೇ ಯುಜುವೇಂದ್ರ ಚಹಲ್ ಕೂಡ ರಶೀದ್ ಖಾನ್ ಅವರಿಗೆ ಶುಭಾಷಯ ತಿಳಿಸಿ ಟ್ವಿಟ್ ಮಾಡಿದ್ದಾರೆ.
