ಮುಂಬೈ(ನ.17): ಸಂಸದರ ಆದರ್ಶ ಗ್ರಾಮ ಯೋಜನೆಯ ಅಡಿಯಲ್ಲಿ ಕ್ರಿಕೆಟಿಗ ಸಚಿನ್‌ ತೆಂಡುಲ್ಕರ್‌ ಇನ್ನೊಂದು ಗ್ರಾಮವನ್ನು ದತ್ತು ಸ್ವೀಕರಿಸುವುದಾಗಿ ಪ್ರಕಟಿಸಿದ್ದಾರೆ.

2014ರಲ್ಲಿ ಗುಂಟೂರು ಜಿಲ್ಲೆಯ ಸಮೀಪದ ಪುಟ್ಟಮರಾಜುವಾರಿ ಖಂಡ್ರಿಗಾ ಗ್ರಾಮವನ್ನು ದತ್ತು ಪಡೆದಿದ್ದ ಸಚಿನ್‌, ಈ ಗ್ರಾಮದಲ್ಲಿ 6 ಕೋಟಿ ರೂ. ಮೊತ್ತದ ಯೋಜನೆಗಳನ್ನು ಬುಧವಾರ ಉದ್ಘಾಟಿಸಿದ್ದಾರೆ. ಬಳಿಕ ಸಮಾರಂಭವೊಂದರಲ್ಲಿ ಮಾತನಾಡಿದ ಸಚಿನ್‌, ಖಂಡ್ರಿಗಾದಿಂದ ಕೇವಲ ಅರ್ಧ ಕಿ.ಮೀ. ದೂರದಲ್ಲಿರುವ ಗೊಲ್ಲಪಲ್ಲಿ ಎಂಬ ಗ್ರಾಮವನ್ನು ದತು ¤ಪಡೆಯುತ್ತಿರುವುದಾಗಿ ಹೇಳಿದ್ದಾರೆ. ಆ ಗ್ರಾಮದ ಅಭಿವೃದ್ಧಿಗೆ 3.05 ಕೋಟಿ ರೂ.ಗಳನ್ನು ವ್ಯಯಿಸುವುದಾಗಿ ತಿಳಿಸಿದ್ದಾರೆ.

ಸಚಿನ್‌ 2014ರ ನವೆಂಬರ್‌'ನಲ್ಲಿ ಖಂಡ್ರಿಗಾ ಗ್ರಾಮವನ್ನು ದತ್ತು ಪಡೆದಿದ್ದರು. ಗ್ರಾಮಕ್ಕೆ ಎರಡನೇ ಬಾರಿಗೆ ಭೇಟಿ ನೀಡಿದ ಸಚಿನ್‌, ಗ್ರಾಮದ ನಿವಾಸಿಗಳ ಜತೆ ಸಚಿನ್‌ ಕೆಲ ಹೊತ್ತು ಸಂವಾದ ನಡೆಸಿದರು. ಗ್ರಾಮದಲ್ಲಿ ಮಹತ್ವದ ಬದಲಾವಣೆ ಆಗಿರುವುದು ಖುಷಿ ನೀಡಿದೆ ಎಂದು ಹೇಳಿದರು. ಇದೇ ವೇಳೆ, ಸ್ವಚ್ಛ ಮತ್ತು ಆರೋಗ್ಯಕರ ಭಾರತ ನಿರ್ಮಾಣ ಮಾಡುವಂತೆ ಜನರಿಗೆ ಕರೆ ನೀಡಿದರು.