ಈಗಾಗಲೇ ಟ್ರೇಲರ್‌ ಹಾಗೂ ಒಂದು ಹಾಡು ಬಿಡುಗಡೆಯಾಗಿದ್ದು ಸಾಕಷ್ಟು ಜನಪ್ರಿಯಗೊಂಡಿದೆ. 

ಮುಂಬೈ(ಮೇ.06): ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಜೀವನಾಧರಿತ ‘‘ಸಚಿನ್‌: ಎ ಬಿಲಿಯನ್‌ ಡ್ರೀಮ್ಸ್‌'' ಪಂಚ ಭಾಷೆಗಳಲ್ಲಿ ತೆರೆಗೆ ಅಪ್ಪಳಿ​ಸಲಿದೆ.

ಹಿಂದಿ, ಇಂಗ್ಲೀಷ್‌, ಮರಾಠಿ, ತಮಿಳು ಹಾಗೂ ತೆಲುಗು ಭಾಷೆ​ಗಳಲ್ಲಿ ಚಿತ್ರ ಬಿಡು​ಗಡೆ ಆಗಲಿದೆ ಎಂದು ಚಿತ್ರ ತಂಡ ಸ್ಪಷ್ಟಪಡಿಸಿದೆ.

ಈ ಕುರಿತು ಮಾತನಾಡಿ​ರುವ ಚಿತ್ರದ ನಿರ್ಮಾಪಕ ರವಿ ಭಾಗ್‌ ಚಂದ್ಕಾ, ‘‘ಸಚಿನ್‌ ತೆಂಡುಲ್ಕರ್‌ ಅವರು ಭಾಷೆಯನ್ನು ಮೀರಿದ ಸಂವೇದನೆ. ಅವರು ಸೃಷ್ಟಿಸಿದ ದಾಖಲೆ ಪ್ರತಿ​ಯೊಬ್ಬ ಭಾರತೀಯನು ಹೆಮ್ಮೆ ಪಡುವಂತಹುದು. ಅವರ ಕಥೆಗೆ ಪ್ರತಿಯೊಬ್ಬರು ಸಾಕ್ಷಿಯಾಗಬೇಕು ಎಂದಿದ್ದಾರೆ. 
ಚಿತ್ರಕ್ಕೆ ಸಂಗೀತ ಮಾಂತ್ರಿಕ ಎ.ಆರ್‌.ರಹಮಾನ್‌ ಸಂಗೀತ ಸಂಯೋಜನೆ ಮಾಡಿದ್ದಾರೆ. ಜೇಮ್ಸ್‌ ಎಸ್ಕೈರ್ನ್ ಆ್ಯಕ್ಷನ್‌ ಕಟ್‌ ಹೇಳಿರುವ ಈ ಚಿತ್ರ ಮೇ 27ರಂದು ವಿಶ್ವಾದ್ಯಂತ ತೆರೆ ಕಾಣಲಿದ್ದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಈಗಾಗಲೇ ಟ್ರೇಲರ್‌ ಹಾಗೂ ಒಂದು ಹಾಡು ಬಿಡುಗಡೆಯಾಗಿದ್ದು ಸಾಕಷ್ಟು ಜನಪ್ರಿಯಗೊಂಡಿದೆ.