ಇದೇ ತಿಂಗಳ 26ರಂದು ವಿಶ್ವದಾದ್ಯಂತ ಸುಮಾರು 2000ಕ್ಕೂ ಹೆಚ್ಚು ಪರದೆಗಳಲ್ಲಿ ಬಿಡುಗಡೆ ಕಂಡಿರುವ ಬಹುನಿರೀಕ್ಷಿತ ಚಿತ್ರವು ಹಿಂದಿ ಸೇರಿದಂತೆ ಒಟ್ಟು 5 ಭಾಷೆಗಳಲ್ಲಿ ತೆರೆಗೆ ಅಪ್ಪಳಿಸಿತ್ತು.
ನವದೆಹಲಿ(ಮೇ.30): ಸಚಿನ್ ತೆಂಡುಲ್ಕರ್ ಜೀವನಾಧಾರಿತ ಸಿನಿಮಾ ‘ಸಚಿನ್ ಎ ಬಿಲಿಯನ್ ಡ್ರೀಮ್ಸ್’ ನಾಲ್ಕನೇ ದಿನಕ್ಕೆ ಬಾಕ್ಸ್ ಆಫೀಸ್‌ನಲ್ಲಿ ₹ 30 ಕೋಟಿಗೂ ಹೆಚ್ಚು ಹಣ ಸಂಪಾದಿಸಿದೆ ಎಂದು ವರದಿಗಳು ತಿಳಿಸಿವೆ.
ಇದೇ ತಿಂಗಳ 26ರಂದು ವಿಶ್ವದಾದ್ಯಂತ ಸುಮಾರು 2000ಕ್ಕೂ ಹೆಚ್ಚು ಪರದೆಗಳಲ್ಲಿ ಬಿಡುಗಡೆ ಕಂಡಿರುವ ಬಹುನಿರೀಕ್ಷಿತ ಚಿತ್ರವು ಹಿಂದಿ ಸೇರಿದಂತೆ ಒಟ್ಟು 5 ಭಾಷೆಗಳಲ್ಲಿ ತೆರೆಗೆ ಅಪ್ಪಳಿಸಿತ್ತು.
ಬಿಡುಗಡೆಯಾದ ಮೊದಲ ದಿನವೇ ₹ 8.6 ಕೋಟಿ ಗಳಿಸಿದ್ದ ಸಿನಿಮಾ, ಶನಿವಾರ ಮತ್ತು ಭಾನುವಾರ ಕ್ರಮವಾಗಿ ₹ 9.20 ಕೋಟಿ ಹಾಗೂ ₹ 10.25 ಕೋಟಿ ಗಳಿಸಿತ್ತು. ಸೋಮವಾರ 4.20 ಕೋಟಿ ರುಪಾಯಿ ಕಲೆಹಾಕುವ ಮೂಲಕ ಕೇವಲ ನಾಲ್ಕೇ ದಿನದಲ್ಲಿ 30 ಕೋಟಿಗೂ ಅಧಿಕ ಆದಾಯ ಗಳಿಸುವಲ್ಲಿ ಸಚಿನ್ ಸಿನೆಮಾ ಯಶಸ್ವಿಯಾಗಿದೆ.