ಸಾನಿಯಾ ಮಿರ್ಜಾಗೆ ಕಿರುಕುಳ- ಬಾಂಗ್ಲಾ ಕ್ರಿಕೆಟಿಗನಿಗೆ 6 ತಿಂಗಳು ನಿಷೇಧ!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 1, Sep 2018, 5:11 PM IST
Sabbir Rahman teased Sania Mirza Shoaib Malik launched a complaint
Highlights

ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾಗೆ ಬಾಂಗ್ಲಾದೇಶದ ಸ್ಟಾರ್ ಕ್ರಿಕೆಟಿಗ ಕಿರುಕುಳ ನೀಡಿದ ಆರೋಪದ ಮೇಲೆ ಇದೀಗ ನಿಷೇಧದ ಶಿಕ್ಷೆಗೆ ಗುರಿಯಾಗಿದ್ದಾನೆ. ಬಾಂಗ್ಲಾ ಕ್ರಿಕೆಟಿನ ವಿರುದ್ಧ ದೂರ ಸಲ್ಲಿಸಿರುವ ಸಾನಿಯಾ ಪತ್ನಿ ಶೋಯಿಬ್ ಮಲ್ಲಿಕ್, ಬಾಂಗ್ಲಾ ಕ್ರಿಕೆಟಿಗ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದರು. ಇದೀಗ ಬಾಂಗ್ಲಾ ಕ್ರಿಕೆಟ್ ಮಂಡಳಿ ಶಿಕ್ಷೆ ಪ್ರಕಟಿಸಿದೆ.
 

ಲಾಹೋರ್(ಸೆ.01): ಟೀಂ ಇಂಡಿಯಾ ಟೆನಿಸ್ ತಾರೆ ಸಾನಿಯಾ ಮಿರ್ಜಾ ವಿರುದ್ಧ ಅಸಂಬದ್ಧ ಹೇಳಿಕೆ ನೀಡಿದ ಆರೋಪದಡಿ ಬಾಂಗ್ಲಾದೇಶ ಕ್ರಿಕೆಟಿಗ ಸಬ್ಬೀರ್ ರಹಮಾನ್ ಇದೀಗ 6 ತಿಂಗಳ ನಿಷೇಧದ ಶಿಕ್ಷೆಗೆ ಗುರಿಯಾಗಿದ್ದಾರೆ. 

ನಾಲ್ಕು ವರ್ಷಗಳ ಹಿಂದೆ ಸಾನಿಯಾ ಮಿರ್ಜಾ ಹಾಗು ಪತಿ, ಪಾಕಿಸ್ತಾನ ಕ್ರಿಕೆಟಿಗ ಶೋಯಿಬ್ ಮಲ್ಲಿಕ್ ಖಾಸಗಿ ಕಾರ್ಯಕ್ರಮಕ್ಕಾಗಿ ಬಾಂಗ್ಲಾ ರಾಜಧಾನಿ ಢಾಕೆಗೆ ತೆರಳಿದ್ದರು. ಈ ವೇಳೆ ಬಾಂಗ್ಲಾ ಕ್ರಿಕೆಟಿಗ ಸಬ್ಬೀರ್ ರಹಮಾನ್, ಸಾನಿಯಾ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಇಲ್ಲ ಸಲ್ಲದ ಆರೋಪ ಮಾಡಿದ್ದರು. ಇಷ್ಟೇ ಅಲ್ಲ ಕಿರುಕುಳ ನೀಡಿದ್ದರು. 

ಸಬ್ಬೀರ್ ವರ್ತನೆಗೆ ರೋಸಿ ಹೋದ ಪತಿ ಶೋಯಿಬ್ ಮಲ್ಲಿಕ್, ಡಾಕಾ ಕ್ರಿಕೆಟ್ ಸಮಿತಿಗೆ ದೂರು ನೀಡಿದ್ದರು. ಇದೀಗ ಡಾಕಾ ಕ್ರಿಕೆಟ್ ಸಮಿತಿ ತನಿಖೆ ಪೂರ್ಣಗೊಳಿಸಿದೆ. ಸಬ್ಬೀರ್ ರಹಮಾನ್ ಮೇಲಿನ ಆರೋಪ ಸಾಬೀತಾಗಿದೆ. ಹೀಗಾಗಿ ಬಾಂಗ್ಲಾ ಕ್ರಿಕೆಟ್ ಮಂಡಳಿಗೆ 6 ತಿಂಗಳ ನಿಷೇಧ ಹೇರಿದೆ. 

ಈಗಾಗಲೇ ಸಬ್ಬೀರ್ ರಹಮಾನ್ ಅಭಿಮಾನಿಯೊಂದಿಗೆ ಅನುಚಿತ ವರ್ತನೆಯಿಂದ 6 ತಿಂಗಳ ನಿಷೇಧಕ್ಕೊಳಗಾಗಿದ್ದಾರೆ. ಇಷ್ಟೇ ಅಲ್ಲ ಬಾಂಗ್ಲಾ ಪ್ರಿಮಿಯರ್ ಲೀಗ್ ಟೂರ್ನಿ ವೇಳೆ ಹೊಟೆಲ್ ರೂಂಗೆ ಯಾರ ಅನುಮತಿ ಪಡೆಯದೆ ಮಹಿಳೆಯನ್ನ ಕರೆದುಕೊಂಡು ಬಂದು ವಿವಾದಕ್ಕೆ ಕಾರಣವಾಗಿದ್ದರು. ಇದೀಗ ಸಾನಿಯಾ ಮಿರ್ಜಾಗೆ ಕಿರುಕುಳ ನೀಡಿದ ಆರೋಪದಲ್ಲಿ ಮತ್ತೆ 6 ತಿಂಗಳು ನಿಷೇಧಕ್ಕೊಳಗಾಗಿದ್ದಾರೆ.
 

loader