ಈಗಾಗಲೇ ಮೊದಲ ಟೆಸ್ಟ್ ಗೆದ್ದು ಆತ್ಮವಿಶ್ವಾಸದಲ್ಲಿರುವ ಬಾಂಗ್ಲಾದೇಶ ತವರಿನಲ್ಲಿ ಮತ್ತೊಂದು ಪಂದ್ಯ ಗೆಲ್ಲುವ ನಿರೀಕ್ಷೆಯಲ್ಲಿದೆ.

ಚಿತ್ತಗಾಂಗ್(ಸೆ.04): ಆಫ್ ಸ್ಪಿನ್ನರ್ ನಥಾನ್ ಲಿಯಾನ್ (77/5) ಅವರ ಸ್ಪಿನ್ ಮೋಡಿ ಹೊರತಾಗಿಯೂ, ನಾಯಕ ಮುಷ್ಫೀಕರ ರಹೀಂ ಮತ್ತು ಶಬ್ಬೀರ್ ರಹಮಾನ್ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ಆತಿಥೇಯ ಬಾಂಗ್ಲಾದೇಶ ತಂಡ, ಆಸ್ಟ್ರೇಲಿಯಾ ವಿರುದ್ಧ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌'ನಲ್ಲಿ ದಿನಾಂತ್ಯಕ್ಕೆ 6 ವಿಕೆಟ್‌'ಗೆ 253 ರನ್‌' ಕಲೆಹಾಕಿದೆ.

ಇಲ್ಲಿನ ಜಹರ್ ಅಹಮದ್ ಚೌಧರಿ ಕ್ರೀಡಾಂಗಣದಲ್ಲಿ ಮೊದಲನೇ ದಿನ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಆರಂಭಿಕ ತಮೀಮ್ ಇಕ್ಬಾಲ್ 9, ಇಮ್ರುಲ್ ಕಯ್ಯಾಸ್ 4, ಸೌಮ್ಯ ಸರ್ಕಾರ್ 33 ಮತ್ತು ಮೊಮಿನಲ್ 31 ರನ್‌ಗಳಿಸಿದ್ದಾಗ ಲಿಯಾನ್‌'ಗೆ ವಿಕೆಟ್ ಒಪ್ಪಿಸಿದರು. ಆಲ್ರೌಂಡರ್ ಶಕೀಬ್ 24 ರನ್‌ಗಳಿಸಿದರೆ, ನಾಯಕ ಮುಷ್ಫೀಕರ್ ರಹೀಂ 62, ಶಬ್ಬೀರ್ ರಹಮಾನ್ 66 ರನ್‌'ಗಳಿಸಿ ಗಮನಸೆಳೆದರು.

ಈಗಾಗಲೇ ಮೊದಲ ಟೆಸ್ಟ್ ಗೆದ್ದು ಆತ್ಮವಿಶ್ವಾಸದಲ್ಲಿರುವ ಬಾಂಗ್ಲಾದೇಶ ತವರಿನಲ್ಲಿ ಮತ್ತೊಂದು ಪಂದ್ಯ ಗೆಲ್ಲುವ ನಿರೀಕ್ಷೆಯಲ್ಲಿದೆ.

ಸಂಕ್ಷಿಪ್ತ ಸ್ಕೋರ್:

ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್: 253/6

ಶಬ್ಬೀರ್ 66, ಮುಷ್ಫೀಕರ್ ಬ್ಯಾಟಿಂಗ್ 62,

ಲಿಯಾನ್ 77/5