Asianet Suvarna News Asianet Suvarna News

ಕ್ಲೇಸೆನ್, ಡುಮಿನಿ ಆರ್ಭಟ, ದಕ್ಷಿಣ ಆಫ್ರಿಕಾಗೆ 6 ವಿಕೇಟ್ ಗೆಲುವು: ಪಾಂಡೆ, ಧೋನಿ ಆಟ ವ್ಯರ್ಥ

ಭರ್ಜರಿ ಆಟವಾಡಿದ ಕ್ಲೇಸೆನ್ 30 ಎಸೆತಗಳಲ್ಲಿ  7 ಅಮೋಘ ಸಿಕ್ಸ್'ರ್ ಹಾಗೂ 3 ಬೌಂಡರಿಯೊಂದಿಗೆ 69 ರನ್ ಚಚ್ಚಿದರು. ಡುಮಿನಿ 40 ಎಸೆತಗಳಲ್ಲಿ 3 ಸಿಕ್ಸ್'ರ್ ಹಾಗೂ 4 ಬೌಂಡರಿಯೊಂದಿಗೆ ಅಜೇಯ 64 ರನ್ ಸಿಡಿಸಿದರು.

SA Won By 6 Wickets

ಸೆಂಚೂರಿಯನ್(ಫೆ.22):  ವಿಕೇಟ್ ಕೀಪರ್  ಕ್ಸೇಸೆಸ್ ಅವರ ಸ್ಫೋಟಕ ಬ್ಯಾಟಿಂಗ್ ಹಾಗೂ ನಾಯಕ ಡುಮಿನಿ ಅವರ ಸಮಯೋಚಿತ ಆಟದಿಂದ ದಕ್ಷಿಣ ಆಫ್ರಿಕಾ ತಂಡ ಭಾರತದ ವಿರುದ್ಧ 6 ವಿಕೇಟ್'ಗಳ ಗೆಲುವು ಸಾಧಿಸಿ 3 ಪಂದ್ಯಗಳ ಸರಣಿಯನ್ನು 1-1 ಸಮ ಮಾಡಿಕೊಂಡರು.

ಟೀಂ ಇಂಡಿಯಾ ನೀಡಿದ 189 ರನ್'ಗಳ ಗುರಿಯನ್ನು ಬೆನ್ನಟ್ಟಿದ ಡುಮಿನಿ ತಂಡ 24 ರನ್ ಆಗುವಷ್ಟರಲ್ಲಿಯೇ  ಸ್ಮುಟ್ಸ್ ಅವರ ವಿಕೆಟ್ ಪಡೆದುಕೊಂಡಿತು. ನಾಯಕ ಡುಮಿನಿ ಜೊತೆ ಹೇಡ್ರಿಕ್ಸ್ ಕೆಲ ಹೊತ್ತು ಆಟವಾಡಿ ಠಾಕೂರ್'ಗೆ ವಿಕೇಟ್ ಒಪ್ಪಿಸಿದರು.  ನಂತರ ಆರಂಭವಾಗಿದ್ದು ನಾಯಕ ಡುಮಿನಿ ಹಾಗೂ ವೀಪರ್ ಕ್ಲೇಸೆನ್ ಅವರ ಜುಗಲ್'ಬಂದಿ.

ಭರ್ಜರಿ ಆಟವಾಡಿದ ಕ್ಲೇಸೆನ್ 30 ಎಸೆತಗಳಲ್ಲಿ  7 ಅಮೋಘ ಸಿಕ್ಸ್'ರ್ ಹಾಗೂ 3 ಬೌಂಡರಿಯೊಂದಿಗೆ 69 ರನ್ ಚಚ್ಚಿದರು. ಡುಮಿನಿ 40 ಎಸೆತಗಳಲ್ಲಿ 3 ಸಿಕ್ಸ್'ರ್ ಹಾಗೂ 4 ಬೌಂಡರಿಯೊಂದಿಗೆ ಅಜೇಯ 64 ರನ್ ಸಿಡಿಸಿದರು. ಇವರಿಬ್ಬರ ಜೊತೆಯಟದಲ್ಲಿ 8.1 ಓವರ್'ಗಳಲ್ಲಿ 93 ರನ್ ಹರಿದು ಬಂತು. ಕ್ಲೇಸೆನ್ ಉನಾದಕ್ಟ್'ಗೆ  ಔಟಾದ ನಂತರ ಮಿಲ್ಲರ್ ಬಂದ ದಾರಿಯಲ್ಲಿಯೇ ನಿರ್ಗಮಿಸಿದರು. ಅಂತಿಮವಾಗಿ 18.4 ಓವರ್'ಗಳಲ್ಲಿ ಆಟ ಮುಗಿಸಿದ್ದು ಬೆಹರ್ದೀನ್ ಮತ್ತು ಡುಮಿನಿ.

ಪಾಂಡೆ,ಧೋನಿ ಅಮೋಘ ಆಟ

ಇದಕ್ಕೂ ಮೊದಲು ಟಾಸ್ ಸೋತು ಆಟ ಆರಂಭಿಸಿದ ಟೀಂ ಇಂಡಿಯಾ ಕರ್ನಾಟಕದ ಮನೀಶ್ ಪಾಂಡೆ(79 ಅಜೇಯ) ಹಾಗೂ ವಿಕೇಟ್ ಕೀಪರ್ ಧೋನಿ(52 ಅಜೇಯ) ಅವರ ಅದ್ಭುತ ಆಟದ ನೆರವಿನಿಂದ 20 ಓವರ್'ಗಳಲ್ಲಿ 188 ರನ್ ಗುರಿ ನೀಡಿತ್ತು.

2ನೇ ಓವರ್'ನಲ್ಲಿಯೇ ಆರಂಭಿಕ ಆಟಗಾರ ರೋಹಿತ್ ಶರ್ಮಾ ದಾಲಾ ಬೌಲಿಂಗ್'ನಲ್ಲಿ ಶೂನ್ಯಕ್ಕೆ ಔಟಾದರು. ನಂತರ ಆಗಮಿಸಿದ  ಸುರೇಶ್ ರೈನಾ(31), ಧವನ್(24) ಜೊತೆ ಸೇರಿ 2ನೇ ವಿಕೇಟ್ ನಷ್ಟಕ್ಕೆ 4.2 ಓವರ್'ಗಳಲ್ಲಿ 44 ರನ್ ಪೇರಿಸಿದಾಗ  ನಾಯಕ ಡುಮಿನಿ ಎಸೆತದಲ್ಲಿ ಧವನ್ ಬೆಹರ್ದೀನ್ ಕ್ಯಾಚಿತ್ತು ಔಟಾದರು.

ಏಕದಿನ ಸರಣಿಯಲ್ಲಿ ಉತ್ತಮ ಆಟವಾಡಿದ ವಿರಾಟ್ ಕೊಹ್ಲಿ ಕೇವಲ 1 ರನ್'ಗೆ ಕೀಪರ್'ಗೆ ಕ್ಯಾಚಿತ್ತು ನಿರ್ಗಮಿಸಿದರು. ರೈನಾ ಕೂಡ 11ನೆ ಓವರ್'ನಲ್ಲಿ ಪೆಲುಕ್ವಾಯೋ'ಗೆ ಎಲ್'ಬಿ ಆದರು.

 

ಸಂಕ್ಷಿಪ್ತ ಸ್ಕೋರ್

ಭಾರತ 20 ಓವರ್'ಗಳಲ್ಲಿ 188/4

(ಮನೀಶ್ ಪಾಂಡೆ ಅಜೇಯ 79, ಧೋನಿ ಅಜೇಯ 52, ರೈನಾ 31, ಧವನ್ 24, ದಾಲಾ 28/2 )

ದಕ್ಷಿಣ ಆಫ್ರಿಕಾ 18.4 ಓವರ್'ಗಳಲ್ಲಿ 189/4

(ಕ್ಲೇಸೆನ್ 69, ಡುಮಿನಿ ಅಜೇಯ 64)

ಪಂದ್ಯ ಶ್ರೇಷ್ಠ: ಕ್ಲೇಸೆನ್

ಫಲಿತಾಂಶ ದಕ್ಷಿಣ ಆಫ್ರಿಕಾಕ್ಕೆ 6 ವಿಕೇಟ್ ಗೆಲುವು

ಸರಣಿ 1-1 ಸಮ

ಅಂತಿಮ ಪಂದ್ಯ ಫೆ.24 ರಾತ್ರಿ 9.30 ಗಂಟೆಗೆ

Follow Us:
Download App:
  • android
  • ios