ಟಾಸ್ ಸೋತರು ಬ್ಯಾಂಟಿಂಗ್‌ಗೆ ಇಳಿಸಲ್ಪಟ್ಟ ಸುರೇಶ್ ರೈನಾ ನೇತೃತ್ವದ ಗುಜರಾತ್ ಲಯನ್ಸ್ ತಂಡ ರೈಸಿಂಗ್ 161 ರನ್‌ಗೆ ಆಲೌಟ್ ಆಯಿತು.
ಪುಣೆ(ಮೇ.01): ಈ ಬಾರಿಯ ಐಪಿಎಲ್ನಲ್ಲಿ ಭರ್ಜರಿ 14.5 ಕೋಟಿ ರು.ಗೆ ಸೇಲಾಗಿದ್ದ ಬೆನ್ ಸ್ಟೋಕ್ಸ್ (103 ರನ್) ಸಿಡಿಸಿದ ಭರ್ಜರಿ ಶತಕದ ನೆರವಿನಿಂದಾಗಿ ಪುಣೆ ತಂಡ, ಗುಜರಾತ್ ಲಯನ್ಸ್ ತಂಡವನ್ನು 5 ವಿಕೆಟ್ಗಳಿಂದ ಸೋಲಿಸಿದೆ.
ಟಾಸ್ ಸೋತರು ಬ್ಯಾಂಟಿಂಗ್ಗೆ ಇಳಿಸಲ್ಪಟ್ಟ ಸುರೇಶ್ ರೈನಾ ನೇತೃತ್ವದ ಗುಜರಾತ್ ಲಯನ್ಸ್ ತಂಡ ರೈಸಿಂಗ್ 161 ರನ್ಗೆ ಆಲೌಟ್ ಆಯಿತು. ಈ ಬೃಹತ್ ಮೊತ್ತ ಬೆನ್ನಟ್ಟಿದ್ದ ಪುಣೆ ತಂಡ ಕೇವಲ 10 ರನ್ಗೆ 3 ವಿಕೆಟ್ ಕಳೆದುಕೊಂಡು ಹೀನಾಯ ಸೋಲಿನ ಭೀತಿಯಲ್ಲಿತ್ತು. 42 ರನ್ಗೆ 4ನೇ ವಿಕೆಟ್ ಬಿತ್ತು. ಆದರೆ ಈ ಹಂತದಲ್ಲಿ ಜೊತೆಗೂಡಿದ ಬೆನ್ ಸ್ಟೋಕ್ಸ್ ಮತ್ತು ಧೋನಿ ಭರ್ಜರಿ 4ನೇ ವಿಕೆಟ್ಗೆ 76 ರನ್ ಜೊತೆಯಾಟ ನೀಡಿದರು. ಧೋನಿ 26 ರನ್ಗಳಿಸಿ ಔಟಾದ ವೇಳೆಯೂ ಪುಣೆ ಸಂಕಷ್ಟದಿಂದ ಹೊರಬಂದಿರಲಿಲ್ಲ. ಆದರೆ ಈ ವೇಳೆಯೂ ಎದೆಗುಂದದೇ ಆಡಿದ ಸ್ಟೋಕ್ಸ್ ಕ್ರಿಸ್ಟಿಯನ್ (17) ಜೊತೆಗೂಡಿ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು.
ಇದಕ್ಕೂ ಮೊದಲು ಬ್ಯಾಟಿಂಗ್ ನಡೆಸಿದ್ದ ಗುಜರಾತ್ ಪರ ಆರಂಭಿಕ ಆಟಗಾರರಾದ ಇಶಾನ್ ಕಿಶಾನ್ (31 ರನ್) ಹಾಗೂ ಬ್ರೆಂಡನ್ ಮೆಕ್ಕಲಂ (45 ರನ್) ಆರ್ಭಟದ ಬ್ಯಾಂಟಿಂಗ್ನಿಂದ ಭರ್ಜರಿ ಮೊತ್ತ ದಾಖಲಿಸುವ ಸೂಚನೆ ನೀಡಿತು.
ಆದರೆ ಈ ಹಂತದಲ್ಲಿ ಸ್ಪಿನ್ನರ್ ತಾಹಿರ್ 3 ವಿಕೆಟ್ ಕಿತ್ತು ಪುಣೆಗೆ ಆಘಾತ ನೀಡಿದರು. ಈ ಸಂದರ್ಭದಲ್ಲಿ ಜೊತೆಗೂಡಿದ ದಿನೇಶ್ ಕಾರ್ತಿಕ್ (29 ರನ್) ಹಾಗೂ ರವೀಂದ್ರ ಜಡೇಜಾ (19 ರನ್)ತಂಡಕ್ಕೆ ಚೇತರಿಕೆ ನೀಡಿದರು.
ಸಂಕ್ಷಿಪ್ತ ಸ್ಕೋರ್:
ಗುಜರಾತ್ 19.5 ಓವರ್ಗಳಲ್ಲಿ 161 (ಮೆಕ್ಕಲಂ 45, ಇಶಾನ್ 31, ತಾಹಿರ್ 27/3),
ಪುಣೆ 19.5 ಓವರ್ಗಳಲ್ಲಿ 167/5 (ಸ್ಟೋಕ್ಸ್ 103, ಧೋನಿ 26, ಧಂಪಿ 35/2
ಪಂದ್ಯ ಶ್ರೇಷ್ಠ: ಬೆನ್ ಸ್ಟೋಕ್ಸ್
