ಐಪಿಎಲ್ 2018: ಆರ್’ಸಿಬಿಗೆ ಶಾಕ್ ಕೊಟ್ಟ ಪಾಂಡ್ಯ

Royal Challengers Bangalore post 167 for 7
Highlights

ಮನನ್ ವೋಹ್ರಾ, ಮೆಕ್ಲಮ್ ಸ್ಫೋಟಕ ಬ್ಯಾಟಿಂಗ್ ಹೊರತಾಗಿಯೂ ಹಾರ್ದಿಕ್ ಪಾಂಡ್ಯ ಓವರ್ ಹ್ಯಾಟ್ರಿಕ್ ನೆರವಿನಿಂದ ಆರ್’ಸಿಬಿಯನ್ನು 167 ರನ್’ಗಳಿಗೆ ನಿಯಂತ್ರಿಸಿದೆ.

ಬೆಂಗಳೂರು[ಮೇ.01]: ಮನನ್ ವೋಹ್ರಾ, ಮೆಕ್ಲಮ್ ಸ್ಫೋಟಕ ಬ್ಯಾಟಿಂಗ್ ಹೊರತಾಗಿಯೂ ಹಾರ್ದಿಕ್ ಪಾಂಡ್ಯ ಓವರ್ ಹ್ಯಾಟ್ರಿಕ್ ನೆರವಿನಿಂದ ಆರ್’ಸಿಬಿಯನ್ನು 167 ರನ್’ಗಳಿಗೆ ನಿಯಂತ್ರಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಆರ್’ಸಿಬಿ ಆರಂಭ ಉತ್ತಮವಾಗಿರಲಿಲ್ಲ. ತಂಡದ ಮೊತ್ತ 38 ರನ್’ಗಳಾಗಿದ್ದಾಗ ಡಿಕಾಕ್[8] ಮೆಕ್ಲೆಲಾಗನ್’ಗೆ ವಿಕೆಟ್ ಒಪ್ಪಿಸಿದರು. ಸ್ಫೋಟಕ ಆಟವಾಡಿದ ಮನನ್ ವೋಹ್ರಾ 45 ರನ್ ಸಿಡಿಸಿ ಮಾರ್ಕಂಡೆಗೆ ವಿಕೆಟ್ ಒಪ್ಪಿಸಿದರು. ಮೂರನೇ ವಿಕೆಟ್’ಗೆ ಕೊಹ್ಲಿ ಹಾಗೂ ಮೆಕ್ಲಮ್ ಜೋಡಿ 60 ರನ್’ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 120ರ ಗಡಿ ದಾಟಿಸಿದರು. ಮೆಕ್ಲಮ್ 37 ರನ್ ಸಿಡಿಸಿದರೆ, ಕೊಹ್ಲಿ 32 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ಆರ್’ಸಿಬಿ 7 ವಿಕೆಟ್ ಕಳೆದುಕೊಂಡು 167 ರನ್ ಕಲೆಹಾಕಿದೆ.
ಓವರ್ ಹ್ಯಾಟ್ರಿಕ್ ಮಾಡಿದ ಪಾಂಡ್ಯ: ಕಳೆದ ಕೆಲ ಪಂದ್ಯಗಳಲ್ಲಿ ದುಬಾರಿಯಾಗಿದ್ದ ಹಾರ್ದಿಕ್ ಪಾಂಡ್ಯ ತಾವೆಸೆದ ವೈಯುಕ್ತಿಕ ಮೂರನೇ ಓವರ್’ನಲ್ಲಿ ಮನ್ದೀಪ್ ಸಿಂಗ್, ವಿರಾಟ್ ಕೊಹ್ಲಿ ಅವರನ್ನು ಮೊದಲೆರಡು ಎಸೆತಗಳಲ್ಲಿ ಪೆವಿಲಿಯನ್ ಹಾದಿ ತೋರಿಸಿದರೆ, ಇದೇ ಓವರ್’ನ ಕೊನೆಯ ಎಸೆತದಲ್ಲಿ ವಾಷಿಂಗ್ಟನ್ ಸುಂದರ್ ಅವರನ್ನು ಬಲಿ ಪಡೆದರು.
ಒಂದು ಹಂತದಲ್ಲಿ 143 ರನ್’ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಆರ್’ಸಿಬಿ ಕೊನೆಯಯಲ್ಲಿ ಕಾಲಿನ್ ಡಿ ಗ್ರಾಂಡ್’ಹೋಂ ಸಿಡಿಸಿದ ಮೂರು ಸಿಕ್ಸರ್’ಗಳ ನೆರವಿನಿಂದ 160ರ ಗಡಿ ದಾಟಲು ನೆರವಾಯಿತು.
ಮುಂಬೈ ಪರ ಹಾರ್ದಿಕ್ ಪಾಂಡ್ಯ 3 ವಿಕೆಟ್ ಪಡೆದರೆ, ಮಯಾಂಕ್ ಮಾರ್ಕಂಡೆ, ಮೆಕ್’ಲಾಗನ್ ಹಾಗೂ ಬುಮ್ರಾ ತಲಾ ಒಂದೊಂದು ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್: 
ಆರ್’ಸಿಬಿ: 167/7
ಮನನ್ ವೋಹ್ರಾ: 45
ಹಾರ್ದಿಕ್ ಪಾಂಡ್ಯ: 28/3

loader