ಅಬುದಾಬಿ(ನ.07): ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ನಡುವಿನ ಮೊದಲ ಏಕದಿನ ಪಂದ್ಯ ವಿವಾದಕ್ಕೆ ಕಾರಣವಾಗಿದೆ. ಪಾಕಿಸ್ತಾನ ಆಲ್ರೌಂಡರ್ ಮೊಹಮ್ಮದ್ ಹಫೀಜ್ ಬೌಲಿಂಗ್ ಶೈಲಿಯನ್ನ,ನ್ಯೂಜಿಲೆಂಡ್ ಬ್ಯಾಟ್ಸ್‌ಮನ್ ರಾಸ್ ಟೇಲರ್ ಬಹಿರಂಗವಾಗಿ ಪ್ರಶ್ನಿಸಿದ್ದಾರೆ.

ಹಫೀಜ್ ಮೊದಲ ಓವರ್ ಮಾಡುತ್ತಿದ್ದಂತೆ, ಕ್ರೀಸ್‌ನಲ್ಲಿದ್ದ ರಾಸ್ ಟೇಲರ್ ಪ್ರಶ್ನಿಸಿದ್ದಾರೆ. ಹಫೀಜ್ ಬೌಲಿಂಗ್ ಶೈಲಿ ಕಾನೂನು ಬಾಹಿರ ಎಂದು  ಅಂಪೈರ್‌ಗೆ ಸೂಚಿಸಿದ್ದಾರೆ. ಟೇಲರ್ ಕೈಸನ್ನೇ ಮಾಡುತ್ತಿದ್ದಂತೆ ಪಾಕಿಸ್ತಾನ ನಾಯಕ ಸರ್ಫಾರಾಜ್ ಅಹಮ್ಮದ್ ರೊಚ್ಚಿಗೆದ್ದಿದ್ದಾರೆ. ಇಷ್ಟೇ ಅಲ್ಲ ಅಂಪೈರ್ ಜೊತೆ ವಾಗ್ವಾದ ನಡೆಸಿದ್ದಾರೆ. 

 

 

ಆಕ್ಷೇಪಣ ಬೌಲಿಂಗ್ ಶೈಲಿಯಿಂದ ಮೊಹಮ್ಮದ್ ಈಗಾಗಲೇ ಹಲವು ಭಾರಿ ನಿಷೇಧಕ್ಕೊಳಗಾಗಿದ್ದಾರೆ. ನಿಷೇಧದ ಬಳಿಕ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ ಹಫೀಜ್ ಮೇಲೆ ರಾಸ್ ಟೇಲರ್ ತಿರುಗಿ ಬಿದ್ದಿದ್ದಾರೆ.

ರಾಸ್ ಟೇಲರ್ ಮೈದಾನದ ನಡವಳಿ ನಿಯಮ ಉಲ್ಲಂಘಿಸಿದ್ದಾರೆ. ಬೌಲರ್ ಶೈಲಿ ಹಾಗೂ ಇತರ ಆಕ್ಷೇಪಣ ಬೌಲಿಂಗ್ ಕುರಿತು ಐಸಿಸಿ ಮ್ಯಾಚ್ ರೆಫ್ರಿ ದೂರು ಸಲ್ಲಿಸಿ ವಿಚಾರಣೆ ನಡೆಸಲಾಗುತ್ತೆ. ಇಲ್ಲಿ ಬ್ಯಾಟ್ಸ್‌ಮನ್‌ಗಳೂ ಲಿಖಿತ ದೂರು ನೀಡಲು ಅವಕಾಶವಿದೆ. ಆದರೆ ಮೈದಾನದಲ್ಲಿ ಯಾವುದೇ ರೀತಿ ಸನ್ನೇ ಮೂಲಕ ವಿರೋಧ ವ್ಯಕ್ತಪಡಿಸುವ ಅವಕಾಶವಿಲ್ಲ. ಇಷ್ಟೇ ಅಲ್ಲ ಇದು ಎದುರಾಳಿಯನ್ನ ಅವಮಾನ ಮಾಡಿದಂತೆ.