ಟೇಲರ್ ಟಿ20 ಕ್ರಿಕೆಟ್‌'ನಲ್ಲಿ ನ್ಯೂಜಿಲೆಂಡ್ ಪರ ಅತಿಹೆಚ್ಚು ರನ್ ಕಲೆಹಾಕಿರುವ 3ನೇ ಬ್ಯಾಟ್ಸ್‌ಮನ್ ಆಗಿದ್ದು ಕಳೆದ 11 ತಿಂಗಳಿಂದ ಅವರು ತಂಡದಲ್ಲಿ ಕಾಣಿಸಿಕೊಂಡಿಲ್ಲ.

ವೆಲ್ಲಿಂಗ್‌'ಟನ್(ಫೆ.12): ನ್ಯೂಜಿಲೆಂಡ್‌'ನ ಹಿರಿಯ ಆಟಗಾರ ರಾಸ್ ಟೇಲರ್ ಅವರನ್ನು ಮತ್ತೊಮ್ಮೆ ಟಿ20 ತಂಡದಿಂದ ಹೊರಗಿಡಲಾಗಿದೆ.

ಮುಂದಿನ ವಾರ ಪ್ರಾರಂಭವಾಗುವ ದಕ್ಷಿಣ ಆಫ್ರಿಕಾ ತಂಡದ ವಿರುದ್ಧದ ಸರಣಿಗೆ ನ್ಯೂಜಿಲೆಂಡ್ ಕ್ರಿಕೆಟ್ ತಂಡವನ್ನು ಪ್ರಕಟಿಸಿದೆ. ಏಕದಿನ ಪಂದ್ಯದಲ್ಲಿ ಟೇಲರ್ ಅವರನ್ನು ಉಳಿಸಿಕೊಂಡಿರುವ ಆಯ್ಕೆ ಮಂಡಳಿ ಚುಟುಕು ಕ್ರಿಕೆಟ್‌'ಗೆ ಮರಳುವ ಹಿರಿಯ ಆಟಗಾರನ ಇಚ್ಛೆಗೆ ಮಣೆ ಹಾಕಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಇವರ ಬದಲಿಗೆ ಕೋರಿ ಆ್ಯಂಡರ್ಸನ್ ಮತ್ತು ಟಾಮ್ ಬ್ರೂಸ್ ಅವರ ಮೇಲೆ ನಂಬಿಕೆಯಿರಿಸಿದೆ. ಟೇಲರ್ ಟಿ20 ಕ್ರಿಕೆಟ್‌'ನಲ್ಲಿ ನ್ಯೂಜಿಲೆಂಡ್ ಪರ ಅತಿಹೆಚ್ಚು ರನ್ ಕಲೆಹಾಕಿರುವ 3ನೇ ಬ್ಯಾಟ್ಸ್‌ಮನ್ ಆಗಿದ್ದು ಕಳೆದ 11 ತಿಂಗಳಿಂದ ಅವರು ತಂಡದಲ್ಲಿ ಕಾಣಿಸಿಕೊಂಡಿಲ್ಲ.

ಕಿವೀಸ್ ಟಿ20 ತಂಡ:

ಕೇನ್ ವಿಲಿಯಮ್ಸನ್(ಕಪ್ತಾನ), ಕೋರಿ ಆ್ಯಂಡರ್ಸನ್, ಟ್ರೆಂಟ್ ಬೌಲ್ಟ್, ಟಾಮ್ ಬ್ರೂಸ್, ಲುಕು ಫರ್ಗ್ಯುಸನ್, ಕೋಲಿನ್ ಡಿ ಗ್ರಾಂಡ್‌'ಹೋಂ, ಮಾರ್ಟಿನ್ ಗುಪ್ಟಿಲ್, ಕೋಲಿನ್ ಮುನ್ರೋ, ಜೇಮ್ಸ್ ನೀಶಮ್, ಲೊಕಿರಾಂಚಿ, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ಬೆನ್ ವೀಲರ್

ಏಕದಿನ ತಂಡ:

ಕೇನ್ ವಿಲಿಯಮ್ಸನ್ (ಕಪ್ತಾನ), ಟ್ರೆಂಟ್ ಬೌಲ್ಟ್, ನೀಲ್ ಬ್ರೂಮ್, ಲೊಕಿ ಫರ್ಗ್ಯುಸನ್, ಕೋಲಿನ್ ಡಿ ಗ್ರಾಂಡ್‌'ಹೋಂ, ರಾಸ್ ಟೇಲರ್, ಮಾರ್ಟಿನ್ ಗುಪ್ಟಿಲ್, ಮ್ಯಾಟ್ ಹೆನ್ರಿ, ಟಾಮ್ ಲಾಥಮ್, ಜೇಮ್ಸ್ ನೀಶಮ್, ಲುಕು ರಾಂಚಿ, ಮಿಚೆಲ್ ಸ್ಯಾಂಟ್ನರ್, ಟಿಂ ಸೌಥಿ, ಇಶ್ ಸೋಧಿ