ಪಾಕಿಸ್ತಾನ ವಿರುದ್ಧ 2ನೇ ಇನಿಂಗ್ಸ್‌'ನಲ್ಲಿ ಬ್ಯಾಟಿಂಗ್‌'ಗೆ ಇಳಿಯುವ ಮುನ್ನ ಟೇಲರ್‌ಗೆ ಕಣ್ಣಿನ ಸಮಸ್ಯೆ ಎದುರಾಗಿತ್ತು.

ಕ್ರೈಸ್ಟ್‌'ಚರ್ಚ್(ನ.20): ನ್ಯೂಜಿಲೆಂಡ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ರಾಸ್ ಟೇಲರ್ ದೃಷ್ಠಿ ಸಮಸ್ಯೆಯಿಂದ ಬಳಲುತ್ತಿದ್ದು ಕಣ್ಣಿನ ಪರೀಕ್ಷೆಗೆ ಒಳಪಡಲಿದ್ದಾರೆ.

ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಟೇಲರ್ ಬ್ಯಾಟಿಂಗ್ ಮಾಡುವ ವೇಳೆ ಅವರಿಗೆ ಚೆಂಡು ಅಸ್ಪಷ್ಟವಾಗಿ ಕಾಣಿಸಿದೆ. ಸಾಮಾನ್ಯವಾಗಿ ಟೇಲರ್ 4ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲಿಳಿಯುತ್ತಾರೆ. ಆದರೆ 2ನೇ ಇನಿಂಗ್ಸ್‌'ನಲ್ಲಿ ಬ್ಯಾಟಿಂಗ್‌'ಗೆ ಇಳಿಯುವ ಮುನ್ನ ಟೇಲರ್‌ಗೆ ಕಣ್ಣಿನ ಸಮಸ್ಯೆ ಎದುರಾಗಿತ್ತು. ಹೀಗಾಗಿ ಟೇಲರ್ ಬದಲಿಗೆ ನಿಕೋಲಸ್ ಬ್ಯಾಟಿಂಗ್‌'ಗೆ ಇಳಿದಿದ್ದರು ಎಂದು ಕೋಚ್ ಮೈಕ್ ಹೇಸನ್ ಹೇಳಿದ್ದಾರೆ.

ಟೇಲರ್ ಶೀಘ್ರದಲ್ಲಿಯೇ ಕಣ್ಣಿನ ತಜ್ಞರಲ್ಲಿ ಸೂಕ್ತ ಚಿಕಿತ್ಸೆ ಪಡೆಯಲಿದ್ದಾರೆ ಎಂದು ತಂಡದ ಆಡಳಿತ ಮಂಡಳಿ ತಿಳಿಸಿದೆ.

ಕಳೆದ ವರ್ಷವೂ ರಾಸ್ ದೃಷ್ಠಿ ದೋಷದ ಸಮಸ್ಯೆಯನ್ನು ಎದುರಿಸಿದ್ದರು.