ಒಂದೇ ದಿನ 2 ಪ್ರೇಯಸಿಯರ ಜತೆ ರೊನಾಲ್ಡಿನೊ ವಿವಾಹ..!

Ronaldinho to marry two women at the same time
Highlights

ಬ್ರೆಜಿಲ್‌ನ ಫುಟ್ಬಾಲ್ ದಿಗ್ಗಜ ರೊನಾಲ್ಡಿನೊ, ಆಗಸ್ಟ್ ನಲ್ಲಿ ತನ್ನ ಇಬ್ಬರು ಪ್ರೇಯಸಿಯರಾದ ಪ್ರಿಸಿಲ್ಲ ಕೊಲ್ಹೊ ಮತ್ತು ಬಿಟ್ರಿಜ್ ಸೌಜಾರನ್ನು ಒಂದೇ ಸಮಯದಲ್ಲಿ ಮದುವೆಯಾಗಲು ಸಜ್ಜಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ರೊನಾಲ್ಡಿನೊ ಅವರ ಇಬ್ಬರೂ ಪ್ರೇಯಸಿಯರ ಕುಟುಂಬಸ್ಥರು ಈ ಗ್ರ್ಯಾಂಡ್ ವೆಡ್ಡಿಂಗ್ ಗೆ ಭರ್ಜರಿ ತಯಾರಿ ನಡೆಸಿದ್ದಾರೆ.

ರಿಯೊ ಡಿ ಜನೈರೊ: ಬ್ರೆಜಿಲ್‌ನ ಫುಟ್ಬಾಲ್ ದಿಗ್ಗಜ ರೊನಾಲ್ಡಿನೊ, ಆಗಸ್ಟ್ ನಲ್ಲಿ ತನ್ನ ಇಬ್ಬರು ಪ್ರೇಯಸಿಯರಾದ ಪ್ರಿಸಿಲ್ಲ ಕೊಲ್ಹೊ ಮತ್ತು ಬಿಟ್ರಿಜ್ ಸೌಜಾರನ್ನು ಒಂದೇ ಸಮಯದಲ್ಲಿ ಮದುವೆಯಾಗಲು ಸಜ್ಜಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ರೊನಾಲ್ಡಿನೊ ಅವರ ಇಬ್ಬರೂ ಪ್ರೇಯಸಿಯರ ಕುಟುಂಬಸ್ಥರು ಈ ಗ್ರ್ಯಾಂಡ್ ವೆಡ್ಡಿಂಗ್ ಗೆ ಭರ್ಜರಿ ತಯಾರಿ ನಡೆಸಿದ್ದಾರೆ. 

38 ವರ್ಷದ ರೊನಾಲ್ಡಿನೊ ಪ್ರಿಸಿಲ್ಲರೊಂದಿಗೆ ರಿಂದ ಡೇಟಿಂಗ್ ನಡೆಸುತ್ತಿದ್ದಾರೆ. ಆದರೆ ಅದಕ್ಕೂ ಮೊದಲೇ ಹಲವು ವರ್ಷಗಳಿಂದ ಬ್ರಿಟಿಜ್ ರನ್ನು ಪ್ರೀತಿಸುತ್ತಿದ್ದಾರೆ. ಕಳೆದ ಡಿಸೆಂಬರ್ ನಿಂದ ಇಬ್ಬರು ಪ್ರೇಯಸಿಯರೂ ರೊನಾಲ್ಡಿನೊ ಜೊತೆ ವಾಸಿಸುತ್ತಿದ್ದು, ಜನವರಿಯಲ್ಲಿ ಇಬ್ಬರನ್ನೂ ಮದುವೆಗೆ ಒಪ್ಪಿಸಿದ್ದರು ಎನ್ನಲಾಗಿದೆ.

ಇಬ್ಬರೊಂದಿಗೂ ನಿಶ್ಚಿತಾರ್ಥ ಮಾಡಿಕೊಂಡಿರುವ ರೊನಾಲ್ಡಿನೊ ಒಂದೇ ರೀತಿಯ ಉಡುಗೊರೆಯನ್ನು ಸಹ ನೀಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ರೊನಾಲ್ಡಿನೊ ಅವರ ಮದುವೆ ವಿಷಯ ತಿಳಿದು ಅವರ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

loader